Advertisement

ಇಮ್ರಾನ್ ಖೇಡವಾಲಾ.. ಗುಜರಾತ್ ನ 182 ಶಾಸಕರಲ್ಲಿ ಇವರೊಬ್ಬರೇ ಮುಸ್ಲಿಂ ಶಾಸಕ

11:31 AM Dec 10, 2022 | Team Udayavani |

ಅಹಮದಾಬಾದ್: 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಭರ್ಜರಿ ಜಯ ದಾಖಲಿಸಿದೆ. ಈ ನಡುವೆ ಸಂಪೂರ್ಣ ಚುನಾವಣೆಯಲ್ಲಿ ಜಯ ಗಳಿಸಿದ್ದು ಒಬ್ಬ ಮುಸ್ಲಿಂ ಅಭ್ಯರ್ಥಿ ಮಾತ್ರ. ಅವರೇ ಕಾಂಗ್ರೆಸ್‌ ನ ಇಮ್ರಾನ್ ಖೇಡವಾಲಾ.

Advertisement

ಈ ಹಿಂದಿನ ವಿಧಾನಸಭೆಯಲ್ಲಿ ಮೂವರು ಮುಸ್ಲಿಂ ಶಾಸಕರಿದ್ದರು. ಮೂವರೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದವರು.

ಅಹಮದಾಬಾದ್ ನಗರದ ಜಮಾಲ್ಪುರ್-ಖಾಡಿಯಾ ವಿಧಾನಸಭಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕರಾದ ಇಮ್ರಾನ್ ಖೇಡವಾಲಾ ಅವರು ಗುರುವಾರ ನಡೆದ ಚುನಾವಣೆಯಲ್ಲಿ 13,658 ಮತಗಳ ಅಂತರದಿಂದ ಗೆದ್ದು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡರು.

ಇದನ್ನೂ ಓದಿ:ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ ಎರಡು ಬದಲಾವಣೆ

ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭೂಷಣ್ ಭಟ್ ಅವರನ್ನು ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರದಲ್ಲಿ ಸೋಲಿಸಿದರು. ಅಲ್ಲಿ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ರಾಜ್ಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಸಬೀರ್ ಕಬ್ಲಿವಾಲಾ ಕೂಡ ಕಣದಲ್ಲಿದ್ದರು.

Advertisement

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಮೂವರು ಹಾಲಿ ಶಾಸಕರು ಸೇರಿ ಒಟ್ಟು ಆರು ಮಂದಿಯನ್ನು ಕಣಕ್ಕಿಳಿಸಿತ್ತು. ಆದರೆ ಇಬ್ಬರು ಶಾಸಕರು ಸೇರಿ ಐವರು ಸೋಲನುಭವಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next