Advertisement
ಅಲ್ ಖಾದಿರ್ ಟ್ರಸ್ಟ್ ಅಕ್ರಮದಲ್ಲಿ ಬಂಧಿತರಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಅವರನ್ನು ತತ್‌ಕ್ಷಣವೇ ತನ್ನ ಎದುರು ಹಾಜರುಪಡಿಸಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ಆದೇಶ ನೀಡಿತ್ತು. ಅದರ ಅನ್ವಯ ಪಾಕ್ ಸರಕಾರ ತಡಬಡಾಯಿಸಿಕೊಂಡು ಅವರನ್ನು ಕೋರ್ಟ್ ಗೆ ಹಾಜರುಪಡಿಸಿತು. ಬಿಗಿ ಬಂದೋಬಸ್ತ್ನಲ್ಲಿ ಅವರನ್ನು ಕೋರ್ಟ್ ಹಾಲ್‌ಗೆ ಕರೆದುಕೊಂಡು ಬಂದ ತತ್‌ಕ್ಷಣ ಬಾಗಿಲು ಮುಚ್ಚಿ ವಿಚಾರಣೆ ನಡೆಸಲಾಯಿತು. ಖಾನ್ ಬಿಡುಗಡೆ ಆದೇಶ ಪ್ರಕಟವಾಗುತ್ತಿದ್ದಂತೆಯೇ ದೇಶಾದ್ಯಂತ ಅವರ ಪಕ್ಷದ ಕಾರ್ಯಕರ್ತರು ಸಂಭ್ರ ಮಾಚರಣೆ ನಡೆಸಿದ್ದಾರೆ. ಇದರಿಂದಾಗಿ ಪಾಕ್ ಸರಕಾರಕ್ಕೆ ಭಾರೀ ಮುಖಭಂಗವೂ ಆಗಿದೆ.
Related Articles
Advertisement
ಎಲ್ಲೆಲ್ಲೂ ಸೇನೆ: ಪಾಕಿಸ್ಥಾನದಾದ್ಯಂತ ಈಗ ಸೈನಿಕರ ಬೂಟುಗಾಲುಗಳ ಸಪ್ಪಳ ಮತ್ತು ಮಿಲಿಟರಿಗೆ ಸೇರಿದ ವಾಹನಗಳ ಸಂಚಾರದ ಸದ್ದು ಕೇಳುತ್ತಿದೆ. ಟ್ವಿಟರ್‌ನಲ್ಲಿ ಸೇನೆ ಇರುವ ಪ್ರದೇಶಗಳು, ಗಲಭೆ ಉಂಟಾಗಿ ಕಟ್ಟಡಗಳು, ವಾಹನಗಳು ಹೊತ್ತಿ ಉರಿಯುತ್ತಿರುವ ಫೋಟೋ, ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಕಠಿನ ಕ್ರಮ ನಿಶ್ಚಿತಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಶೆಹಬಾಜ್ ಶರೀಫ್ ಅವರು ದೊಂಬಿ ಸಹಿತ ಕಿಡಿಗೇಡಿತನದ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪಿಟಿಐ ಪಕ್ಷದ ಕಾರ್ಯಕರ್ತರು ತತ್‌ಕ್ಷಣವೇ ದೇಶ ವಿರೋಧಿ ಕೃತ್ಯಗಳನ್ನು ಬದಿಗಿಟ್ಟು ಕಾನೂನು ಮತ್ತು ಸುವ್ಯವಸ್ಥೆ ಪಾಲಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಕಪ್ಪು ಚುಕ್ಕೆ: ಸೇನೆ
ಪಾಕಿಸ್ಥಾನ ಸೇನೆಯು ಮೇ 9ರ ಘಟನೆಯನ್ನು “ದೇಶದ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆR’ ಎಂದು ಬಣ್ಣಿಸಿದೆ. ಆ ದೇಶದ ಸೇನೆಯ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಮಾಧ್ಯಮ ಹೇಳಿಕೆಯಲ್ಲಿ “ಪ್ರತಿಭಟನಕಾರರು ಸೇನೆಯ ಆಸ್ತಿಯನ್ನು ಗುರುತು ಮಾಡಿ ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಮೇ 9 ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆ’ ಎಂದು ಬಣ್ಣಿಸಿದೆ.