Advertisement
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪೊಲೀಸ್ ಇಲಾಖೆಯ ಪ್ರಧಾನ ಕಚೇರಿ ಆದೇಶದ ಮೇರೆಗೆ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹು-ಧಾ ಪೊಲೀಸ್ ಕಮಿಷ°ರೇಟ್ ಘಟಕ ವ್ಯಾಪ್ತಿಯ 15 ಪೊಲೀಸ್ ಠಾಣೆಗಳಿಂದ ಒಟ್ಟು 659 ಬೀಟ್ ರಚಿಸಲಾಗಿದೆ. ಒಂದೊಂದುಬೀಟ್‌ಗೆ ಕನಿಷ್ಠ 50 ಸಾರ್ವಜನಿಕರಂತೆ ಒಟ್ಟು 17856 ಜನರನ್ನು ಬೀಟ್‌ನ ಸದಸ್ಯರನ್ನಾಗಿ ನೇಮಿಸಲಾಗಿದೆ.
Related Articles
Advertisement
ಪ್ರತಿಯೊಬ್ಬ ಬೀಟ್ ನಾಗರಿಕ ಸಿಬ್ಬಂದಿಗೆ ಪೊಲೀಸ್ ಇಲಾಖೆಯಿಂದ ಗುರುತಿನ ಚೀಟಿ ನೀಡಲಾಗುವುದು ಎಂದರು. ದಿನದ ಎಲ್ಲ ಸಮಯದಲ್ಲೂ 50 ಸದಸ್ಯರಲ್ಲಿ ಒಬ್ಬರಲ್ಲ ಒಬ್ಬರೂ ಗಸ್ತಿನಲ್ಲಿರುತ್ತಾರೆ. ಇದರಿಂದ ಅಪರಾಧ ಚಟುವಟಿಕೆಗಳು ಎಲ್ಲೇ ನಡೆದರೂ ಇಲ್ಲವೆ ನಡೆಯುವ ಮುನ್ಸೂಚಗಳಿದ್ದರೂ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ರವಾನೆಯಾಗುತ್ತದೆ.
ಆ ಮೂಲಕ ಅವಳಿ ನಗರದಲ್ಲಿ ಸಹಜವಾಗಿ ಅಪರಾಧ ಪ್ರಕರಣಗಳನ್ನು ಕಡಿವಾಣ ಹಾಕಬಹುದಾಗಿದೆ. ಜೊತೆಗೆ ಪೊಲೀಸರು ನಾಗರಿಕ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಹಕಾರಿಯಾಗುತ್ತದೆ. ಬೀಟ್‌ನಲ್ಲಿರುವ ನಾಗರಿಕರು ಸಮಾಜದಲ್ಲಿ ಎಲ್ಲರಂತೆಯೇ ಸಾಮಾನ್ಯರಂತೆ ಕರ್ತವ್ಯ ನಿರ್ವಹಿಸುತ್ತ ಅಪರಾಧ ಚಟುವಟಿಕೆ ಕುರಿತು ಮಾಹಿತಿ ನೀಡಲಿದ್ದಾರೆ.
ಆದರೆ ಮಾಹಿತಿ ನೀಡಿದವರ ಹೆಸರು ಮಾತ್ರ ತುಂಬಾ ಗೌಪ್ಯವಾಗಿರುತ್ತದೆ. ಇವರೆಲ್ಲ ಮμ¤ಯಲ್ಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದರು. ಬೀಟ್ ಸಿಬ್ಬಂದಿಗೆ 110 ಪರಿಪೂರ್ಣ ಮಾಹಿತಿಗಳುಳ್ಳ ಪುಸ್ತಕ ನೀಡಲಾಗಿದೆ. ಬೀಟ್ ನಲ್ಲಿ ಓರ್ವ ಎಎಸ್‌ಐ, ಮುಖ್ಯಪೇದೆ ಹಾಗೂ ಇನ್ನುಳಿದಂತೆ 50 ಸದಸ್ಯರು ಇರುತ್ತಾರೆ. ಆಯಾ ಪೊಲೀಸ್ ಠಾಣೆ ಅಧಿಕಾರಿ ಇಲ್ಲವೆ ಮೇಲ್ವಿಚಾರಕರು ವಾರಕ್ಕೊಮ್ಮೆ ಸಭೆ ಸೇರಿ ಸ್ಥಳೀಯ ಪ್ರದೇಶಗಳಲ್ಲಿ ನಡೆಯುವ ಅಪರಾಧ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.
ಬೀಟ್ ಸಿಬ್ಬಂದಿಯಾಗಿ ಆಯ್ಕೆಯಾದ ಸದಸ್ಯರ ನಡವಳಿಕೆ ಬಗ್ಗೆಯೂ ಇಲಾಖೆ ವಿಶೇಷ ಗಮನಹರಿಸಿ ಅವರಿಂದ ಇನ್ನುಳಿದವರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ. ಒಂದು ವೇಳೆ ಅವರಿಂದಲೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.