Advertisement

ಹಣ ಹಿಂಪಡೆಯಲು ವಿಧಿಸಿರುವ ಮಿತಿ ವಾಪಸ್‌ ಪಡೆಯಿರಿ: ಐವನ್‌

03:45 AM Jan 15, 2017 | Team Udayavani |

ಮಂಗಳೂರು: ಜನರು ತಮ್ಮ ಖಾತೆಗಳಿಂದ ಹಣ ಪಡೆಯಲು ವಿಧಿಸಿರುವ ಮಿತಿಯನ್ನು ಪ್ರಧಾನಮಂತ್ರಿ ತತ್‌ಕ್ಷಣ ಹಿಂಪಡೆದುಕೊಳ್ಳಬೇಕು. ಜನರಿಗೆ ಅವಶ್ಯವಿರುವಷ್ಟು ಹಣ ಹಿಂಪಡೆಯಲು ಅನುವು ಮಾಡಿಕೊಡಬೇಕು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಆಗ್ರಹಿಸಿದ್ದಾರೆ.

Advertisement

ಮನಪಾದಲ್ಲಿರುವ ತಮ್ಮ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪನಗದೀಕರಣ ಮಾಡಿ 64 ದಿನಗಳು ಕಳೆದರೂ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಎಲ್ಲ ರಂಗಗಳಲ್ಲಿಯೂ ವ್ಯವಹಾರ ಕುಸಿತಗೊಂಡಿದೆ. ಕೂಲಿ ಕಾರ್ಮಿಕರಿಗೆ ಸಂಬಳ ಸಿಗದೇ ಪರದಾಡುವಂತಾಗಿದೆ. ಅನೇಕ ಸಣ್ಣ ವ್ಯಾಪಾರಸ್ಥರು ಬಾಗಿಲು ಮುಚ್ಚಿದ್ದಾರೆ ಎಂದರು. 

ಜನಧನ್‌ ಸೇರಿದಂತೆ ಯಾವುದೇ ಖಾತೆಗಳಿಂದಲೂ ಪಾನ್‌ ಕಾರ್ಡ್‌ ನೀಡದಿದ್ದಲ್ಲಿ ಹಣ ಹಿಂಪಡೆಯಲು ಸಾಧ್ಯವಾಗುತ್ತಿಲ್ಲ. ಪ್ರಧಾನಿ ಹಣ ಪಡೆಯಲು ಹಾಕಿದ ಮಿತಿ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು. ಸತೀಶ್‌ ಪೆಂಗಾಲ್‌, ಅಬೂಬಕ್ಕರ್‌ ಜಪ್ಪು, ಅನಿಲ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next