Advertisement
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರ ಅನಾವಶ್ಯಕವಾಗಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆಕ್ರೋಶಹೆಚ್ಚಾದ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ. ಭಾರತದಲ್ಲಿ ಬಹಳಷ್ಟು ಮಂದಿ ಹಿಂದಿ ಮಾತನಾಡುತ್ತಾರೆ.
ಹಾಗೆಯೇ ಹಿಂದಿ ಯನ್ನು ಒಪ್ಪಿಕೊಳ್ಳಬೇಕು. ಮಾತೃಭಾಷೆ ಜತೆಗೆ ಹಿಂದಿಯನ್ನು ಕಲಿಯಬೇಕು ಎಂದಿದ್ದಾರೆ. ಆದರೆ ತಾವು ಇಂಗ್ಲಿಷ್ ಮಾಧ್ಯಮದ ವಿರೋಧಿಯೇನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾಯ್ಡು ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಂತೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕೇರಳದ ತಿರುವನಂತಪುರ ಸಂಸದ ಶಶಿ ತರೂರ್, ಹಿಂದಿ ರಾಷ್ಟ್ರಭಾಷೆಯೇನಲ್ಲ, ಬಹಳಷ್ಟು ಮಂದಿ ಮಾತನಾಡುವ ಭಾಷೆಯಷ್ಟೇ. ಹಾಗಂತ ಇದನ್ನು ಎಲ್ಲರ ಮೇಲೆ ಹೇರಲಾಗದು ಎಂದು ಹೇಳಿದ್ದಾರೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರು ಹಿಂದಿ ರಾಷ್ಟ್ರಭಾಷೆ ಎಂದು ಯಾವಾಗ ಘೋಷಿತವಾಯಿತು? ಎಂದು ವ್ಯಂಗ್ಯವಾಡಿದ್ದಾರೆ.