Advertisement

Hospete: ಸ್ಮಾರಕಗಳ ಮಹತ್ವ, ಸಂರಕ್ಷಣೆ ಮುಂದಿನ ಪೀಳಿಗೆಗೆ ತಿಳಿಸೋದು ಅಗತ್ಯ: ಡಿಸಿ ದಿವಾಕರ್

03:20 PM Jun 19, 2024 | Team Udayavani |

ಹೊಸಪೇಟೆ: ಸ್ಮಾರಕಗಳ ಸಂರಕ್ಷಣೆ ಮತ್ತು ಅವುಗಳ ಮಹತ್ವ ಮುಂದಿನ ಪೀಳಿಗೆಗೆ ತಿಳಿಸುವ ಕಾಯಕದೊಂದಿಗೆ ನೈಜ ಇತಿಹಾಸ ಪಸರಿಸುವ ಕಾರ್ಯವಾಗಬೇಕಿದೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.

Advertisement

ಪತ್ರಿಕಾ ದಿನಾಚರಣೆ ನಿಮಿತ್ತ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಯೋಗದಲ್ಲಿ ಬುಧವಾರ ಹಂಪಿಯಲ್ಲಿ  ಆಯೋಜಿಸಿದ್ದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.

ಹಂಪಿಯ ರಾಣಿ ಸ್ನಾನಗೃಹದ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದಲ್ಲಿ ಐತಿಹಾಸಿಕ ಸ್ಮಾರಕಗಳು ಇರೋದು ನಮ್ಮ ಭಾಗದ ಹೆಮ್ಮೆಯಾಗಿದೆ. ಆ ಸ್ಮಾರಕಗಳನ್ನು ಸಂರಕ್ಷಣೆ ಮಾಡಿ, ನೈಜ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕಿದೆ ಎಂದರು.

ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿ.ಎಲ್. ಮಾತಮಾಡಿ, ಪತ್ರಕರ್ತರು ಪಾರಂಪಾರಿಕ ನಡಿಗೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ‌. ಈ ಭಾಗದ ಸ್ಮಾರಕ ಉಳಿವಿಗೆ ಅರಿವಿಗೆ ಇದು ಸಹಕಾರಿಯಾಗಲಿದೆ ಎಂದು ಹೇಳಿದರು.

Advertisement

ಹಂಪಿ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧೀಕ್ಷಕ ನಿಹಿಲ್ ದಾಸ್ ಮಾತನಾಡಿ, ಹಂಪಿ ಅನ್ನೋದೊಂದು ಅದ್ಭುತ. ಇಲ್ಲಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾದರೆ ಈ ಭಾಗದ ಜನರಿಗೆ ಉದ್ಯೋಗವಕಾಶಗಳು ಸಿಗುತ್ತವೆ. ಹಂಪಿಯ ಸಮಗ್ರ ಅಭಿವೃದ್ಧಿಗೆ ಈಗಾಗಲೇ ನೀಲನಕ್ಷೆ ತಯಾರು ಮಾಡಲಾಗಿದೆ. ಯಾವುದೇ ಕಾರಣಕ್ಕೂ ಈ ಭಾಗದ ಜನರು ಹಂಪಿಯನ್ನು ಕಳೆದುಕೊಳ್ಳಬಾರದು. ಹಂಪಿಯ ಒಂದೊಂದು ಕಲ್ಲುಗಳು ಒಂದೊಂದು ಕಥೆಗಳನ್ನು ಹೇಳುತ್ತವೆ. ಈ ಭಾಗದ ಜನರಿಗೆ ಹಂಪಿಯ ಸಮಗ್ರ ಅಭಿವೃದ್ಧಿಯಿಂದಾಗಿ ಅದ್ಭುತ ಉದ್ಯೋಗವಕಾಶಗಳು ಸಿಗುತ್ತದೆ ಎಂದರು.

 

ರಾಣಿ ಸ್ನಾನ ಗೃಹದಿಂದ ಪ್ರಾರಂಭವಾದ ಪಾರಂಪರಿಕ ನಡಿಗೆ ಮಹಾನವಮಿ ದಿಬ್ಬ, ಪಾನ್ ಸುಪಾರಿ ಬಜಾರ್, ಪಟ್ಟಣದ ಎಲ್ಲಮ್ಮ ದೇಗುಲ, ಗಜಶಾಲೆ, ಕಮಲ ಮಹಲ್ ಮೂಲಕ ಸಾಗಿ ಹಜಾರಾರಾಮ ದೇವಸ್ಥಾನದ ಆವರಣಕ್ಕೆ ಮುಕ್ತಾಯಗೊಂಡಿತು.

ಪಿ. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ, ಕಾನಿಪ ಸಂಘದ ರಾಜ್ಯ ಸಮಿತಿ ಸದಸ್ಯ ವೆಂಕೋಬ ನಾಯಕ ಪೂಜಾರ್, ಜಿಲ್ಲಾಧ್ಯಕ್ಷ, ಖಜಾಂಚಿ ವೆಂಕಟೇಶ್, ಪ್ರವಾಸೋದ್ಯಮ ಇಲಾಖೆಯ ಡಿಡಿ ಪ್ರಭುಲಿಂಗ ತಳಕೇರಿ,  ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಅಭಿಯಂತರ ವಿನೋಜ್ ಕುಮಾರ್, ಸಂರಕ್ಷಣಾ ಸಹಾಯಲರಾದ ಸುನೀಲ್ ಕುಮಾರ್ ಎಂ.ಸಿ., ಎಚ್.ರವೀಂದ್ರನಾಥ್, ಪತ್ರಕರ್ತರಾದ ಅನಂತ, ಶ್ರೀನಿವಾಸ್, ಬಸಾಪುರ ಬಸವರಾಜ್, ಕೆ. ಸುರೇಶ್ ಚೌವ್ಹಾಣ್, ಮಂಜುನಾಥ್ ಅಯ್ಯಸ್ವಾಮಿ, ಅನಂತ ಪದ್ಮನಾಭ ರಾವ್, ಜಯಪ್ಪ ರಾಥೋಡ್, ಭೀಮಾ ನಾಯ್ಕ್, ಅಂಬರೀಶ್ ವಾಲ್ಮೀಕಿ, ಖವಾಸ್ ಕೆಬಿ, ಇಂದಿರಾ ಕಲಾಲ್, ಸಂಜಯ್ ಕುಮಾರ್ ಮುರೋಳ್, ಅನೂಪ್ ಕುಮಾರ್, ಮೃತ್ಯುಂಜಯ ಹಿರೇಮಠ್, ಛಾಯಾಗ್ರಾಹಕರಾದ ವಿಜಯ್ ಕುಮಾರ್, ಕೊಟ್ರೇಶ್, ಮೈನು ಇದ್ದರು.

ಹಂಪಿ ಸಿಪಿಐ, ಯಾತನೂರ್, ಪಿಎಸ್ಐ ಶಿವಕುಮಾರ್, ಪ್ರವಾಸಿ ಮಾರ್ಗದರ್ಶಿಗಳಾದ ಈರಣ್ಣ ಪೂಜಾರಿ, ವಿರೂಪಾಕ್ಷಿ, ಡಾ. ವಿಶ್ವನಾಥ್ ಮಾಳ್ಗಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next