Advertisement

ಮಧ್ಯಪ್ರಾಚ್ಯದಿಂದ ಕಚ್ಚಾತೈಲ ಆಮದು ಇನ್ನಷ್ಟು  ಇಳಿಕೆ

01:18 AM Jun 25, 2021 | Team Udayavani |

ಹೊಸದಿಲ್ಲಿ: ಮಧ್ಯಪ್ರಾಚ್ಯದ ತೈಲಸಂಪನ್ನ ರಾಷ್ಟ್ರಗಳಿಂದ ಭಾರತದ ಕಚ್ಚಾತೈಲ ಆಮದು ಈ ಮೇ ತಿಂಗಳಿನಲ್ಲಿ ಕಳೆದ 25 ತಿಂಗಳುಗಳಲ್ಲಿಯೇ ಕನಿಷ್ಠ ಮಟ್ಟದ್ದಾಗಿತ್ತು ಎಂದು ವಾಣಿಜ್ಯ ಮೂಲಗಳ ಅಂಕಿಅಂಶಗಳು ಬಹಿರಂಗಪಡಿಸಿವೆ.

Advertisement

ಕಚ್ಚಾತೈಲ ಆಮದಿಗೆ ಮಧ್ಯಪ್ರಾಚ್ಯ ದೇಶಗಳನ್ನು ಮಾತ್ರ ನೆಚ್ಚಿಕೊಳ್ಳದೆ ಇತರ ಅವಕಾಶಗಳನ್ನು ಬಳಸಿಕೊಳ್ಳುವಂತೆ ಸರಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಕಚ್ಚಾತೈಲ ಸರಬರಾಜನ್ನು ಹೆಚ್ಚಿಸುವಂತೆ ಮತ್ತು ದರ ಇಳಿಕೆಗೆ ಕ್ರಮ ಕೈಗೊಳ್ಳುವಂತೆ ಭಾರತದ ವಿನಂತಿಯನ್ನು ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್‌) ಮತ್ತದರ ಮಿತ್ರ ದೇಶಗಳು ಮನ್ನಿಸದ್ದರಿಂದ ಸರಕಾರ ತನ್ನ ತೈಲ ಸಂಸ್ಕರಣ ಕಂಪೆನಿಗಳಿಗೆ ಈ ಸೂಚನೆ ನೀಡಿತ್ತು.

ಮೇ ತಿಂಗಳಿನಲ್ಲಿ ಭಾರತ 4.2 ಮಿಲಿಯನ್‌ ಬ್ಯಾರಲ್‌ ಪರ್‌ ಡೇ (ಬಿಪಿಡಿ) ಕಚ್ಚಾತೈಲವನ್ನು ಆಯಾತ ಮಾಡಿಕೊಂಡಿದ್ದು, ಇದರಲ್ಲಿ ಮಧ್ಯಪ್ರಾಚ್ಯ ದೇಶಗಳ ಪಾಲು ಶೇ. 52.7 ಆಗಿತ್ತು. ಇದು 2019ರ ಎಪ್ರಿಲ್‌ ಬಳಿಕ ಅತ್ಯಂತ ಕನಿಷ್ಠವಾಗಿದ್ದು, 2021ರ ಶೇ. 67.9ಕ್ಕಿಂತಲೂ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next