Advertisement

ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಣಿಯಾಗಿ

02:55 PM Jul 16, 2022 | Team Udayavani |

ಬೀದರ: ಶಿಕ್ಷಕರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಅಣಿಯಾಗಬೇಕು ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಸಲಹೆ ನೀಡಿದರು.

Advertisement

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ನಗರದ ನೌಬಾದ್‌ನ ಡಯಟ್‌ನಲ್ಲಿ ಆಯೋಜಿಸಿರುವ 12 ದಿನಗಳ ಕಾರ್ಯಾಗಾರವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ನೆರವಾಗಬಲ್ಲ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಮುಂದಿನ ವರ್ಷದಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎಂದರು.

ಮಕ್ಕಳಿಗೆ ಪರಿಣಾಮಕಾರಿ ಬೋಧನೆಗೆ ಪೂರಕವಾಗಿ ಬೋಧನಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಮಾಹಿತಿ ನೀಡಲು ಕಲ್ಯಾಣ ಕರ್ನಾಟಕ ಸಂಘವು ಶಿಕ್ಷಕರಿಗೆ ವಿವಿಧ ಕಾರ್ಯಾಗಾರ ಹಾಗೂ ತರಬೇತಿ ಹಮ್ಮಿಕೊಳ್ಳುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರಕ್ಕೆ 300 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ತಲಾ 150 ಶಿಕ್ಷಕರಿಗೆ ಎರಡು ತಂಡಗಳಲ್ಲಿ ಕಾರ್ಯಾಗಾರ ನಡೆಯಲಿದೆ. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವ ಮನವರಿಕೆ ಮಾಡಲಿದ್ದಾರೆ. ಸುಲಭ ಬೋಧನಾ, ಕಲಿಕಾ ತಂತ್ರಗಳನ್ನೂ ಹೇಳಿಕೊಡಲಿದ್ದಾರೆ ಎಂದರು.

ಬೆಂಗಳೂರಿನ ಆ್ಯಕ್ಟ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಿವೇಕಾನಂದ ಮಾತನಾಡಿ, ಕಾರ್ಯಾಗಾರ ಸ್ಪರ್ಧಾತ್ಮಕ ಶಿಕ್ಷಣದ ಮೇಲೆ ಬೆಳಕು ಚೆಲ್ಲಲಿದೆ. ಬೋಧನಾ ಕೌಶಲ ಹೆಚ್ಚಿಸಿಕೊಳ್ಳಲು ಶಿಕ್ಷಕರಿಗೆ ಸಹಕಾರಿಯಾಗಲಿದೆ ಎಂದರು.

ಡಯಟ್‌ ನೋಡಲ್‌ ಅಧಿ ಕಾರಿ ಸಂತೋಷ ಪೂಜಾರಿ ಕಾರ್ಯಾಗಾರದ ಸಂಕ್ಷಿಪ್ತ ಪರಿಚಯ ನೀಡಿದರು. ಡಯಟ್‌ ಪ್ರಾಚಾರ್ಯ ಡಾ| ಮಹಮ್ಮದ್‌ ಗುರ್ಲಿನ್‌ ಅಧ್ಯಕ್ಷತೆ ವಹಿಸಿದ್ದರು. ಡಿಡಿಪಿಐ ಕಚೇರಿಯ ಗುಂಡಪ್ಪ ಹುಡಗೆ ಇದ್ದರು. ಉಪನ್ಯಾಸಕ ಗೋವಿಂದ ರೆಡ್ಡಿ ನಿರೂಪಿಸಿದರು. ಸಂಘದ ತಾಲೂಕು ಸಂಯೋಜಕ ಗಣಪತಿ ಹಡಪದ ಸ್ವಾಗತಿಸಿದರು. ಉಪನ್ಯಾಸಕ ಲಕ್ಷ್ಮಣ ವಂದಿಸಿದರು. ಜಿಲ್ಲೆಯ ವಿವಿಧ ಶಾಲೆಗಳ 150 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next