ಗಬೇಕೆಂದು ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿ ಬರುತ್ತಿದೆ.
Advertisement
ಬೆಳಂದೂರು, ಸವಣೂರು, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ 8 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಅನುಷ್ಠಾನವಾಗಬೇಕು. ಈ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ 2013 ಫೆಬ್ರವರಿ 26ರಂದುಯೋಜನೆಗೆ ಒಳಪಡುವ ಗ್ರಾಮಗಳಲ್ಲಿ ಮತ್ತು ಕುಮಾರದಾರಾ ನದಿತಟದಲ್ಲಿ ಸರ್ವೆ ಕಾರ್ಯ ನಡೆಸಲಾಗಿತ್ತು. ಈಗ ಈ ಯೋಜನೆಗಾಗಿ 16.5 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಶಾಸಕ ಎಸ್. ಅಂಗಾರ ಅವರು ಮಾರ್ಚ್ ತಿಂಗಳಲ್ಲಿ ಶಿಲಾನ್ಯಾಸ ಮಾಡುವ ಮೂಲಕ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದರು.
ಬೆಳಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹರಿಯುತ್ತಿರುವ ಜೀವನದಿ ಕುಮಾರಧಾರಾದ ನೀರನ್ನು ಬಳಸಿಕೊಂಡು ಸವಣೂರು, ಪಾಲ್ತಾಡಿ, ಪುಣcಪ್ಪಾಡಿ, ಬೆಳಂದೂರು, ಕುದ್ಮಾರು, ಕಾಯಿಮಣ, ಚಾರ್ವಾಕ, ಕಾಣಿಯೂರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ರೂಪಿಸಲಾಗಿದೆ. ಹೀಗಿದೆ ರೂಪು-ರೇಷೆ
ಸವಣೂರು-ಕುದ್ಮಾರು ಗ್ರಾಮಗಳಲ್ಲಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಕಿಂಡಿ ಅಣೆಕಟ್ಟು ಅಥವಾ ಜಾಕ್‌ವೆಲ್ ನಿರ್ಮಿಸಿ ಪಕ್ಕದಲ್ಲೇ ಪಂಪ್ ಹೌಸ್ ನಿರ್ಮಾಣ ಮಾಡಿ, ಕಬ್ಬಿಣದ ಕೊಳವೆಯ ಮೂಲಕ ಬೃಹತ್ ಟ್ಯಾಂಕ್‌ಗೆ ಹಾಯಿಸಿ ಅದನ್ನು ಈ ಗ್ರಾಮಗಳಿಗೆ ಪೂರೈಸುವ ಉದ್ದೇಶ ಈ ಯೋಜನೆಯಲ್ಲಿತ್ತು. ಅಲ್ಲದೆ ಈ ಯೋಜನೆಯ ಶೀಘ್ರ ಅನುಷ್ಠಾನ ಕುರಿತಂತೆ ಸವಣೂರು, ಬೆಳಂದೂರು, ಕಾಣಿಯೂರು ಗ್ರಾ.ಪಂ.ಗಳಲ್ಲಿ ನಿರ್ಣಯ ಕೈಗೊಂಡು ಜಿ.ಪಂ., ಸರಕಾರಕ್ಕೆ ಸಲ್ಲಿಸಲಾಗಿತ್ತು. ಈಗ ಅನುಷ್ಠಾನಕ್ಕೆ ಸಿದ್ಧವಾಗಿದೆ.
Related Articles
ಯೋಜನೆಯ ಕಡತಗಳು ತಾಂತ್ರಿಕ ಮಂಜೂರಾತಿಗಾಗಿ ಮೈಸೂರಿನ ಅಧೀಕ್ಷಕ ಎಂಜಿನಿಯರ್ ಕಚೇರಿಯಿಂದ ಮಂಜೂರುಗೊಂಡು ಬೆಂಗಳೂರಿನ ಮುಖ್ಯ ಎಂಜಿನಿಯರ್ ಕಚೇರಿಗೆ ಕಡತ ವರ್ಗಾವಣೆಯಾಗಬೇಕಿದೆ. ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
– ರೋಹಿದಾಸ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್,
ಪುತ್ತೂರು ವಿಭಾಗ
Advertisement
ಶೀಘ್ರ ಆಗಲಿಬೆಳಂದೂರು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯು ಶೀಘ್ರ ಅನುಷ್ಠಾನವಾಗಬೇಕೆಂಬ ಎಲ್ಲ ಪ್ರಯತ್ನಗಳನ್ನು ಮಾಡಲಾಗಿದೆ. ಕ್ಷೇತ್ರದ ಶಾಸಕ ಎಸ್. ಅಂಗಾರ ಅವರ ಪ್ರಯತ್ನದಿಂದ ಈ ಯೋಜನೆ ಮಂಜೂರಾಗಿದೆ. ತಾಂತ್ರಿಕ ಮಂಜೂರಾತಿಯ ಬಳಿಕ ಕಾಮಗಾರಿ ಆರಂಭವಾಗಲಿದೆ. ಈ ಯೋಜನೆಯು ಶೀಘ್ರ ಅನುಷ್ಠಾನವಾಗಲಿ ಎಂಬ ಆಶಯ ನಮ್ಮದು.
– ಪ್ರಮೀಳಾ ಜನಾರ್ದನ,
ಜಿ.ಪಂ. ಸದಸ್ಯರು. ಪ್ರವೀಣ್ ಚೆನ್ನಾವರ