Advertisement

ಜಲಶಕ್ತಿ ಯೋಜನೆ ನಿರೀಕ್ಷೆಗೂ ಮೀರಿ ಅನುಷ್ಠಾನ

06:08 PM Jul 08, 2022 | Team Udayavani |

ಬಂಗಾರಪೇಟೆ: ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆಯನ್ನು ನಿರೀಕ್ಷೆಗೂ ಮೀರಿ ಅನುಷ್ಠಾನಗೊಳಿಸಲಾಗಿದೆ. ಇಲ್ಲಿನ ಕಾರ್ಯಕ್ರಮಗಳನ್ನು ಇತರೆಡೆ ಅನುಷ್ಠಾನಗೊಳಿಸುವಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಮಂತ್ರಾಲಯ ನಿರ್ದೇಶಕಿ ರೋಸ್‌ ಮೇರಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಕಾಮಸಮುದ್ರ ಹೋಬಳಿಯಲ್ಲಿ ಪಂಚಾಯ್ತಿಯಿಂದ ಜಲಶಕ್ತಿ ಯೋಜನೆ ಮೂಲಕ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳನ್ನು ವೀಕ್ಷಿಸಿ ಮಾತನಾಡಿ, ಮೂರು ದಿನಗಳಿಂದ ಶಾಲೆಗಳಲ್ಲಿ ಅಳವಡಿಸಲಾದ ಮಳೆ ನೀರು ಕೋಯ್ಲು, ಕೆರೆ, ಕಲ್ಯಾಣಿ ಅಭಿವೃದ್ಧಿ ಸೇರಿ ಅಂತರ್ಜಲ ವೃದ್ಧಿಗಾಗಿ ಹಮ್ಮಿಕೊಂಡಿದ್ದ ಹಲವು ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಲಾಯಿತು ಎಂದು ಹೇಳಿದರು.

ಅಂತರ್ಜಲ ಹೆಚ್ಚಳವಾಗಿದೆ: ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆ ನಿರೀಕ್ಷೆಗೂ ಮೀರಿ ಅನುಷ್ಠಾನಗೊಂಡಿದೆ. ಈ ಹಿಂದೆ 1500 ಅಡಿಗಳಲ್ಲಿ ಇದ್ದ ಅಂತರ್ಜಲ ಈಗ 200 ರಿಂದ 300 ಅಡಿಯಲ್ಲಿ ಸಿಗುತ್ತಿದೆ. ತೋಟಗಾರಿಕೆ, ಅರಣ್ಯ ಇಲಾಖೆಯಿಂದಲೂ ಹೆಬ್ಬೇವು ಬೆಳೆಸುವುದು ಸೇರಿ ರಸ್ತೆ ಬದಿ, ಕೆರೆಯ ಅಂಗಳದಲ್ಲಿ ಸಸಿ ಬೆಳೆಸುತ್ತ, ಕೇಂದ್ರದ ಎಲ್ಲಾ ಯೋಜನೆಗಳನ್ನು ಬಳಸಿಕೊಂಡು ಕೋಲಾರವನ್ನು ಅರೆ ಮಾಲೆನಾಡು ರೀತಿಯಲ್ಲಿ ಬದಲಾಯಿಸಲಾಗಿದೆ ಎಂದು ಹೇಳಿದರು.

ಕೇಂದ್ರಕ್ಕೆ ವರದಿ ಸಲ್ಲಿಕೆ: ಜಿಲ್ಲೆಯಲ್ಲಿ ಜಲಶಕ್ತಿ ಯೋಜನೆ ಉತ್ತಮವಾಗಿದೆ. ಇಲ್ಲಿನ ಅಭಿವೃದ್ಧಿ ಕಾರ್ಯಕ್ರಮಗಳನ್ನೇ ಮಾದರಿಯಾಗಿ ತೆಗೆದುಕೊಂಡು, ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ ಎಂದು ವಿವರಿಸಿದರು.

ಅಂತರ್ಜಲ ಮರುಪೂರಣಕ್ಕೆ ಕ್ರಮ: ಜಿಪಂ ಸಿಇಒ ಎಸ್‌.ಯುಕೇಶ್‌ಕುಮಾರ್‌ ಮಾತನಾಡಿ, ಜಲಶಕ್ತಿ ಯೋಜನೆ ಮೂಲಕ ಜಿಲ್ಲೆಯಲ್ಲಿ ಕೆರೆ ಕಲ್ಯಾಣಿ, ಮಳೆ ನೀರು ಕೊಯ್ಲು ಸೇರಿ ಅಂತರ್ಜಲ ಮರುಪೂರಣಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯ ಕ್ರಮಗಳನ್ನು ಕೇಂದ್ರದ ತಂಡ ವೀಕ್ಷಿಸಿದೆ. ಜಿಲ್ಲೆಯಲ್ಲಿ 2,500 ಕೆರೆ ಇದ್ದು, ಈ ವರ್ಷ 120 ಕೆರೆ ಅಭಿವೃದ್ಧಿ ಗೊಳಿಸಲಾಗುತ್ತಿದೆ. ಇದರ ಜೊತೆಗೆ ಕಲ್ಯಾಣಿಗಳ ಜೀರ್ಣೋದ್ಧಾರ, ಅಭಿವೃದ್ಧಿಯನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

Advertisement

ಜಲಾನಯನ ಕಾರ್ಯಕ್ರಮಗಳ ಅನುಷ್ಠಾನ: ಕಡ್ಡಾಯವಾಗಿ ಶಾಲೆ ಸೇರಿ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ಅಳವಡಿಸಲಾಗುತ್ತಿದೆ. ರಸ್ತೆ ಬದಿ ಸೇರಿ ಹಲವು ಕಡೆ ಸಸಿ ನೆಟ್ಟು ಬೆಳೆಸುವ ಕಾರ್ಯ ಕ್ರಮಕ್ಕೆ ಬಹಳ ಒತ್ತು ಕೊಡಲಾಗಿದೆ. ಕೃಷಿ ಇಲಾಖೆಯ ಮೂಲಕ ಜಲಾನಯನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಮಳೆ ನೀರನ್ನು ಭೂಮಿಗೆ ಇಂಗುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದರು. ಈ ವೇಳೆ ಕೇಂದ್ರ ಜಲಶಕ್ತಿ ಮಂತ್ರಾಲಯ ಎಂಜಿನಿಯರ್‌ ಮಂಜು, ತಾಪಂ ಇಒ ವೆಂಕಟೇಶಪ್ಪ, ಕಾಮಸಮುದ್ರ ಗ್ರಾಪಂ ಅಧ್ಯಕ್ಷೆ ಕಾವೇರಿ ಆದಿನಾರಾ ಯಣ, ಉಪಾಧ್ಯಕ್ಷೆ ಮಹಾಲಕ್ಷ್ಮೀ ರಮೇಶಾಚಾರಿ, ಪಿಡಿಒ ವಾಣಿ,
ಕಾರ್ಯದರ್ಶಿ ರಾಜು, ಸದಸ್ಯರಾದ ಶ್ಯಾಮಲಮ್ಮ, ಸೈಯದ್‌ ಅಜ್ಮತ್ತುಲ್ಲಾ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next