Advertisement

ನೀರಾವರಿ ಯೋಜನೆ ಜಾರಿಗೆ ಯತ್ನ: ಹಿರೇಮಠ

12:43 PM Apr 21, 2022 | Team Udayavani |

ಜೇವರ್ಗಿ: ಬರದ ನಾಡಾದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.

Advertisement

ತಾಲೂಕಿನ ಇಟಗಾ ಗ್ರಾಮದ ಭೀಮಾ ನದಿಯ ದಡದಲ್ಲಿ ಬುಧವಾರ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯಾದ್ಯಂತ ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಗೆಲ್ಲಿಸಿ ಅಧಿಕಾರಕ್ಕೆ ತರಲು ಕಾರ್ಯಕರ್ತರು ಈಗಿನಿಂದಲೇ ಕೆಲಸ ಆರಂಭಿಸಬೇಕು ಎಂದು ಕೋರಿದರು.

ಇದೇ ವೇಳೆ ಇಟಗಾ ಗ್ರಾಮಕ್ಕೆ ಆಗಮಿಸಿದ ಜಲಧಾರೆ ರಥಯಾತ್ರೆಯನ್ನು ಗ್ರಾಮಸ್ಥರು ಹಾಗೂ ಮಹಿಳೆಯರು ಕುಂಭ ಕಳಸ, ಭಾಜಾ, ಭಜಂತ್ರಿ ಮುಖಾಂತರ ಅದ್ಧೂರಿಯಾಗಿ ಸ್ವಾಗತಿಸಿದರು.

Advertisement

ಜೆಡಿಎಸ್‌ ಮುಖಂಡರಾದ ಶಿವಕುಮಾರ ನಾಟೀಕಾರ, ಮಹೇಶ್ವರಿ ವಾಲಿ, ಎ.ಬಿ.ಹಿರೇಮಠ ಭೀಮಾ ನದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ನೀರು ಸಂಗ್ರಹಿಸಿದರು. ವೇದಮೂರ್ತಿ ಶರಣಯ್ಯ ಸ್ವಾಮಿ, ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಖಾನಗೌಡರ, ಮುಖಂಡರಾದ ಭಗವಂತರಾಯಗೌಡ ಅಂಕಲಗಾ, ಶಾಮರಾವ್‌ ಸೂರನ್‌, ಶಿವಾನಂದ ದ್ಯಾಮಗೊಂಡ, ಶಂಕರ ಕಟ್ಟಿಸಂಗಾವಿ, ಗುರುನಾಥ ಪೂಜಾರಿ, ಸೈಯದ್‌ ಮುಸ್ತಫಾ, ಶ್ರೀನಿವಾಸ ಜಮಾದಾರ, ಚಂದ್ರಶೇಖರ ಮಲ್ಲಾಬಾದ, ಸಿದ್ಧಲಿಂಗ ಸಾಹು ನಾರಾಯಣಪುರ, ಶಿವಶಂಕರ ಜವಳಗಾ, ರುದ್ರಗೌಡ ಜವಳಗಾ, ಗೊಲ್ಲಾಳಪ್ಪ ಕಡಿ, ಪ್ರದೀಪ ಕಟ್ಟಿ, ಸಿದ್ಧು ಮಾವನೂರ, ಭಗವಂತರಾಯ ಕೋಣಶಿರಸಗಿ, ರಮೇಶ ಕಲ್ಲಶೆಟ್ಟಿ, ಗಫೂರಸಾಬ್‌ ಮಂದೇವಾಲ ಹಾಗೂ ಇಟಗಾ ಗ್ರಾಮಸ್ಥರು, ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next