Advertisement

ವಾಹನ ಸವಾರರಿಗೆ ರಿಲೀಫ್: HSRP ಅಳವಡಿಕೆಗೆ ಗಡುವು ವಿಸ್ತರಣೆ ಮಾಡಿದ ಸರಕಾರ

07:38 PM Feb 14, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ 2019ರ ಎ.1ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫ‌ಲಕ(HSRP )ಅಳವಡಿಕೆಗೆ ಸರಕಾರ ಕೊನೆಗೂ ಗಡುವು 3 ತಿಂಗಳ ಕಾಲ ವಿಸ್ತರಣೆ ಮಾಡಿದೆ.

Advertisement

ವಿಧಾನ ಪರಿಷತ್ ಕಲಾಪದಲ್ಲಿ ಬುಧವಾರ ಮಧುಮಾದೆ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಗಡುವು ಇನ್ನೂ 3 ತಿಂಗಳ ಕಾಲ ವಿಸ್ತರಿಸುತ್ತೇವೆ ಎಂದು ತಿಳಿಸಿದರು.

HSRP ಯನ್ನು ಕಡ್ಡಾಯಗೊಳಿಸಿ ರಾಜ್ಯದ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಕಳೆದ ವರ್ಷದ ಆಗಸ್ಟ್‌ 18ರಂದು ಆದೇಶ ಹೊರಡಿಸಿದ್ದರು. ಮೊದಲುಎಚ್‌ಎಸ್‌ಆರ್‌ಪಿ ಅಳವಡಿಕೆಗೆ 2023ರ ನವೆಂಬರ್‌ 17ರ ವರೆಗೆ ವಾಹನ ಮಾಲಕರಿಗೆ ಗಡುವು ನೀಡಲಾಗಿತ್ತು. ಆ ಬಳಿಕ ಈ ಗಡುವನ್ನು 2024ರ ಫೆ. 17ರ ವರೆಗೆ ವಿಸ್ತರಿಸಲಾಗಿತ್ತು.

ಸಾರಿಗೆ ಇಲಾಖೆ ಮತ್ತು ವಾಹನ ಮಾಲಕರ ನಿರಾಸಕ್ತಿಯ ಪರಿಣಾಮ ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಕ್ರಿಯೆ ತೀರಾ ನಿಧಾನಗತಿಯಲ್ಲಿದ್ದ ಕಾರಣ ಗಡುವು ಸಮೀಪಿಸುತ್ತಿದ್ದಂತೆಯೇ ವಾಹನಗಳ ಮಾಲಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಮುಗಿ ಬೀಳಲಾರಂಭಿಸಿದ್ದರಿಂದ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಲಕ್ಷಾಂತರ ಸಂಖ್ಯೆಯಲ್ಲಿ ವಾಹನಗಳ ಮಾಲಕರು ಏಕಕಾಲದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆಗಾಗಿ ಆನ್‌ಲೈನ್‌ ನೋಂದಣಿಗೆ ಮುಗಿ ಬಿದ್ದ ಪರಿಣಾಮ ಸರ್ವರ್‌ ಮೇಲೆ ಇನ್ನಿಲ್ಲದ ಒತ್ತಡ ಬಿದ್ದು ಸ್ಥಗಿತಗೊಳ್ಳುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next