Advertisement
ಅವರು ಕೋಟದಿಂದ ಹೊರಟ ಪಾದಯಾತ್ರೆ ಸಾಲಿಗ್ರಾಮ ತಲುಪಿ ಅಲ್ಲಿ ಕಾಂಗ್ರೆಸ್ ಪರ ಮತಯಾಚಿಸಿ ನಡೆದ ರೋಡ್ ಶೋದಲ್ಲಿ ಮಾತನಾಡಿದರು.
ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನಾವು ಕೊಟ್ಟ ಗ್ಯಾರಂಟಿಯನ್ನು ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಅಂಗೀಕಾರಗೊಳ್ಳಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಯನ್ನು ಜಾರಿ ಮಾಡದೇ ಇದ್ದರೆ ನಾವು ಮುಂದಿನ ಚುನಾವಣೆಗಳಲ್ಲಿ ಮತ ಯಾಚಿಸುವುದಿಲ್ಲ. ಗ್ಯಾರಂಟಿಯನ್ನು ಜಾರಿ ಮಾಡಿದರೆ ಬಿಜೆಪಿ ಕೂಡಾ ಇಂತಹ ನಿರ್ಧಾರ ಕೈಗೊಳ್ಳುತ್ತದೆಯೇ ಎಂದು ಸವಾಲು ಹಾಕಿದರು. ಹಾಲಾಡಿ ಹೆಸರಲ್ಲಿ ಮತ?
ಡಿಸಿಸಿ ವಕ್ತಾರ ವಿಕಾಸ ಹೆಗ್ಡೆ, ಕುಂದಾಪುರ ಕ್ಷೇತ್ರದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರ ನಾಯಕತ್ವದಲ್ಲಿ ಈ ಚುನಾವಣೆಯಲ್ಲಿ ಇರಬಹುದು. ಆದರೆ ಇಲ್ಲಿ ಅಭ್ಯರ್ಥಿಯ ಪರವಾಗಿ ಯಾರೂ ಮತ ಕೇಳುತ್ತಿಲ್ಲ. ಹಾಲಾಡಿ ಶ್ರೀನಿವಾಸ ಶೆಟ್ಟರ ಹೆಸರು ಹೇಳಿ ಮತ ಕೇಳಲಾಗುತ್ತಿದೆ ಎಂದರು.
Related Articles
Advertisement
ಅಧಿಕಾರಕ್ಕೆಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಎ.ಕುಂದರ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ ಹೆಗ್ಡೆ ಅವರಿಗೆ ರಾಜಕಾರಣ ಹೊಸತಲ್ಲ, ಕ್ಷೇತ್ರದ ಸಮಗ್ರ ಪರಿಚಯ ಹೊಂದಿದ್ದಾರೆ. ಅವರು ಗೆಲುವು ಸಾಧಿಸಲಿದ್ದಾರೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಕಾದ ಅವಶ್ಯವಿಲ್ಲ ಎಂದರು. ಇಂದು ಬೈಕ್ ಜಾಥಾ
ಕಾಂಗ್ರೆಸ್ ಪರವಾಗಿ ಮೇ 8ರಂದು ಸಾಸ್ತಾನದಿಂದ ಕುಂದಾಪುರವರೆಗೆ ಬೈಕ್ ಜಾಥಾ ನಡೆಯಲಿದೆ. ನೂರಾರು ಕಾರ್ಯಕರ್ತರು ಬೈಕ್‌ಗಳಲ್ಲಿ ಕಾಂಗ್ರೆಸ್ ಧ್ವಜದೊಂದಿಗೆ ಜಾಥಾದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ನಗರದಲ್ಲಿ ಪಾದಯಾತ್ರೆ ಮೂಲಕ ಅಭ್ಯರ್ಥಿ ದಿನೇಶ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಇತರ ನಾಯಕರು, ಕಾರ್ಯಕರ್ತರು ಸಾಮೂಹಿಕವಾಗಿ ತೆರಳಿ ಮತಯಾಚನೆ ಮಾಡಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆಲುವಿಗೆ ಮುನ್ನುಡಿ ಬರೆಯಲಿದ್ದಾರೆ. ಈ ಬಾರಿಯ ಚುನಾವಣೆ ಹೊಸ ಇತಿಹಾಸದ ಸೃಷ್ಟಿಗೆ ಕಾರಣವಾಗಲಿದೆ. ಈಗಾಗಲೇ ಕೋಟದಿಂದ ಸಾಲಿಗ್ರಾಮವರೆಗೆ ನಡೆದ ಜಾಥಾ, ಪಾದಯಾತ್ರೆಗೆ ಅಭೂತಪೂರ್ವ ಜನಸ್ಪಂದನ ದೊರೆತಿದ್ದು ಗ್ರಾಮಾಂತರಗಳಲ್ಲಿ ನಡೆದ ಪ್ರಚಾರ ಸಭೆಗಳಿಗೂ ಜನರ ದಂಡೇ ಆಗಮಿಸಿತ್ತು. ದಿನೇಶ್ ಹೆಗ್ಡೆ ಗೆಲುವು ನಿಚ್ಚಳವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.