Advertisement

ಜಿಲ್ಲೆಯಲ್ಲಿ ಫ‌ಲಿತಾಂಶ ಸುಧಾರಣೆ ಯೋಜನೆ ಅನುಷ್ಠಾನ

09:46 PM Feb 06, 2020 | Lakshmi GovindaRaj |

ತುಮಕೂರು: ರಾಜ್ಯದಲ್ಲೇ ಪ್ರಥಮ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಫ‌ಲಿತಾಂಶ ಸುಧಾರಣೆ ಯೋಜನೆ ಅನುಷ್ಠಾನ ಮಾಡಲಾಗಿದ್ದು, ಇದರಡಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ, ಭಾನುವಾರ ವಿಶೇಷ ತರಗತಿ ನಡೆಸಿ ಶೇ. 90ಕ್ಕೆ ಫ‌ಲಿತಾಂಶ ಹೆಚ್ಚಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಆರ್‌.ಎಸ್‌.ಪೆದ್ದಪ್ಪಯ್ಯ ತಿಳಿಸಿದರು.

Advertisement

ಬಾಲಭವನದಲ್ಲಿ ಗುರುವಾರ ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ವಿದ್ಯಾರ್ಥಿ ನಿಲಯಗಳು ಅನ್ನ, ವಸತಿ ನೀಡುವ ಗಂಜಿಕೇಂದ್ರಗಳಾಗಬಾರದು. ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ಕೇಂದ್ರ ಎಲ್ಲಾ ತಾಲೂಕುಗಳಲ್ಲಿ ಆಯಾ ವಿದ್ಯಾರ್ಥಿ ನಿಲಯಗಳ ಮೇಲ್ವಿಚಾರಕರ ನೇತೃತ್ವದಲ್ಲಿ ನಡೆಸಬೇಕು.

ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫ‌ಲಿತಾಂಶ ಕೇವಲ ಪಾಸ್‌ ಆಗಿದೆ ಎಂದು ಘೋಷಿಸುವ ಬದಲು ನವೋದಯ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳ ಮಾದರಿಯಲ್ಲಿ ಪ್ರಥಮ ಶ್ರೇಣಿ ಮತ್ತು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವಂತೆ ಫ‌ಲಿತಾಂಶ ಹೆಚ್ಚಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ತರಬೇತಿಗೆ ಗೈರಾಗದಂತೆ ನೋಡಿ: ತುಮಕೂರು-1, ಚಿಕ್ಕನಾಯಕನಹಳ್ಳಿ-2, ಗುಬ್ಬಿ-1, ಕುಣಿಗಲ್‌-1, ಪಾವಗಡ-4, ಮಧುಗಿರಿ-1, ಕೊರಟಗೆರೆ-1, ತುರುವೇಕೆರೆ-1, ಶಿರಾ-3, ತಿಪಟೂರು-1 ತಾಲೂಕು ಕೇಂದ್ರಗಳಲ್ಲಿ ಆಯ್ದ ವಿದ್ಯಾರ್ಥಿ ನಿಲಯಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಂದರಂತೆ ತರಬೇತಿ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. 6-9ನೇ ತರಗತಿಯಲ್ಲಿರುವ ಮಕ್ಕಳಿಗೆ ಪರೀಕ್ಷೆ ಸಮೀಪಿಸುತ್ತಿದ್ದು, ತರಗತಿ, ತರಬೇತಿಗೆ ಗೈರಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕರ್ತವ್ಯ ಚಾಚು ತಪ್ಪದೇ ಪಾಲಿಸಿ: ನಿಲಯದ ಮೇಲ್ವಿಚಾರಕರು ಮಕ್ಕಳಿಗಾಗಿ ನಾನಿದ್ದೇನೆ. ನನಗಾಗಿ ಮಕ್ಕಳು ಇಲ್ಲ ಎಂಬ ಮನೋಭಾವನೆ ರೂಢಿಸಿಕೊಂಡು ಕರ್ತವ್ಯವನ್ನು ಚಾಚು ತಪ್ಪದೇ ಮಾಡಬೇಕು. ನೋಡಲ್‌ ಅಧಿಕಾರಿಗಳು ಪರೀಕ್ಷಾ ಸಿದ್ಧತೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು. ವಿದ್ಯಾರ್ಥಿನಿಲಯಗಳ ಮೂಲಸೌಕರ್ಯ ಒದಗಿಸಲು ಇಲಾಖೆ ಹಲವು ಯೋಜನೆ ಹಾಕಿಕೊಂಡಿದೆ ಎಂದು ಭರವಸೆ ನೀಡಿದರು.

Advertisement

ತುಮಕೂರು ಜಿಲ್ಲೆಯಲ್ಲಿ 100 ವಿದ್ಯಾರ್ಥಿ ನಿಲಯಗಳಿದ್ದು, ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಫ‌ಲಿತಾಂಶ ವೃದ್ಧಿಸುವಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹಕಾರ ಮತ್ತು ಸಂಯೋಗದೊಂದಿಗೆ ಅಧಿಕಾರಿಗಳು ಕಾರ್ಯನಿರ್ವಸಬೇಕು ಎಂದು ತಾಕೀತು ಮಾಡಿದರು. ಜಿಲ್ಲಾ ನೋಡಲ್‌ ಅಧಿಕಾರಿ ಬಿ.ಟಿ.ಮಂಜುನಾಥ್‌, ಜಂಟಿ ನಿರ್ದೇಶಕ ಎಚ್‌.ಎಸ್‌.ಪ್ರೇಮನಾಥ್‌ ಹಾಗೂ ಎಲ್ಲಾ ತಾಲೂಕುಗಳ ಸಹಾಯಕ ನಿರ್ದೇಶಕರು, ಅಧೀಕ್ಷಕರು, ನಿಲಯದ ಮೇಲ್ವಿಚಾರಕರಿದ್ದರು.

ವಿದ್ಯಾರ್ಥಿನಿಲಯದಲ್ಲಿ ದೀರ್ಘ‌ ಗೈರು ಹಾಜರಾಗಿರುವ ವಿದ್ಯಾರ್ಥಿಗಳ ಪೂರ್ವಪರ ಮಾಹಿತಿ ಶಾಲೆಯ ಶಿಕ್ಷಕರಿಂದ ಪಡೆದು ಅವರ ಪೋಷಕರಿಗೆ ಮತ್ತು ಬಾಲಕಿಯರಾಗಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮೇಲ್ವಿàಚಾರಕರು ಮಾಹಿತಿ ನೀಡಬೇಕು. ಬಯೋಮೆಟ್ರಿಕ್‌ ಕಡ್ಡಾಯವಾಗಿ ಜಾರಿಗೊಳಿಸಬೇಕು.
-ಆರ್‌.ಎಸ್‌. ಪೆದ್ದಪ್ಪಯ್ಯ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next