Advertisement
ಕೇಂದ್ರ ಗೃಹ ಸಚಿವಾಲಯವು ಈ ಸಂಬಂಧಿಸಿದಂತೆ ಅಧಿಸೂಚನೆಗಳನ್ನು ಹೊರಡಿಸಿದೆ. ಆ ಪ್ರಕಾರ ವಸಾಹಾತು ಶಾಹಿ ಕಾಲದ ಕಾನೂನುಗಳಾದ 1860ರ ಭಾರತೀಯ ದಂಡ ಸಂಹಿತೆ, 1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಹಾಗೂ 1872ರ ಭಾರತೀಯ ಸಾಕ್ಷಿ ಕಾಯ್ದೆಗಳನ್ನು ನೂತನ ಕಾನೂನುಗಳು ಬದಲಿಸಲಿವೆ.
Related Articles
Advertisement
ಭಾರತೀಯ ನ್ಯಾಯ ಸಂಹಿತೆ- 2023
ಪ್ರಸ್ತುತ ಅಸ್ತಿತ್ವದಲ್ಲಿರುವ 1860ರ ಭಾರತೀಯ ದಂಡ ಸಂಹಿತೆ (ಐಪಿಸಿ)ಯನ್ನು ಭಾರತೀಯ ನ್ಯಾಯ ಸಂಹಿತೆ ಬದಲಿಸಿದೆ. ಇದು ದೇಶದ್ರೋಹದ ಬದಲಿಗೆ ಪ್ರತ್ಯೇಕವಾದ, ಸಾರ್ವಭೌಮತ್ವಕ್ಕೆ ಧಕ್ಕೆ ತರುವಂಥ ಅಪರಾಧ, ಭಯೋತ್ಪಾದಕ ಚಟುವಟಿಕೆಗಳಿಗೆ ವಿಭಿನ್ನ ವಿಭಾಗವನ್ನೇ ಗುರುತಿಸಿದೆ. ಗುಂಪು ಹತ್ಯೆ, ಅಪ್ರಾಪ್ತ ವಯಸ್ಕರ ಸಾಮೂಹಿಕ ಅತ್ಯಾಚಾರದಂಥ ಪ್ರಕರಣಗಳಿಗೆ ಮರಣದಂಡನೆ ವಿಧಿಸಲು ನಿಬಂಧನೆ ರೂಪಿಸಲಾಗಿದೆ. ಜತೆಗೆ ವ್ಯಭಿಚಾರ, ಆತ್ಮಹತ್ಯೆ ಪ್ರಕರಣಗಳು, ಸಲಿಂಗ ಕಾಮವನ್ನು ಈ ಹೊಸ ಕಾನೂನಿನ ಅನ್ವಯ ಪರಿಗಣಿಸಲಾಗುವುದಿಲ್ಲ.
ಭಾರತೀಯ ಸಾಕ್ಷ್ಯ ಕಾಯ್ದೆ-2023
1872ರ ಭಾರತೀಯ ಸಾಕ್ಷಿ ಕಾಯ್ದೆಯನ್ನು ಹೊಸ ಕಾಯ್ದೆ ಬದಲಿಸಲಿದೆ. ಹೊಸ ಕಾಯ್ದೆಯು ಅಪರಾಧಗಳಿಗೆ ಸಂಬಂಧಿಸಿದಂತೆ ವಿದ್ಯುನ್ಮಾನ ಮಾದರಿಯ ಸಾಕ್ಷ್ಯಗಳನ್ನು ಒಪ್ಪಿಕೊಳ್ಳುತ್ತದೆ ಹಾಗೂ ಎಲ್ಲ ದಾಖಲೆಗಳ ಡಿಜಿಟಲೀಕರಣಕ್ಕೆ ಒತ್ತು ನೀಡುತ್ತದೆ.
ಭಾರತೀಯ ನಾಗರಿಕ ಸುರಕ್ಷತಾ ಸಂಹಿತಾ -2023
1973ರ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸ್ಥಾನದಲ್ಲಿ ಈ ಕಾನೂನು ಜಾರಿಯಾಗಲಿದೆ. ಯಾವುದೇ ಗಂಭೀರ ಪ್ರಕರಣಗಳಿಗೆ ಸಂಬಂ ಧಿಸಿದಂತೆ 30 ದಿನಗಳಲ್ಲಿ ತನಿಖೆ ಮತ್ತು ವಿಚಾರಣೆ ಖಚಿತಪಡಿಸುತ್ತದೆ. ಸಂತ್ರಸ್ತರ ವೀಡಿಯೋ ರೆಕಾರ್ಡಿಂಗ್ ಕಡ್ಡಾಯಗೊಳಿಸಿದೆ.
ಅಪರಾಧಗಳು ಐಪಿಸಿ ಸೆಕ್ಷನ್‌ಗಳು ಬಿಎನ್‌ಎಸ್ ಸೆಕ್ಷನ್ಗಳುಕೊಲೆ (302) 101
ವರದಕ್ಷಿಣೆ ಕಿರುಕುಳದಿಂದ ಸಾವು 304(ಬಿ) 79
ಅತ್ಯಾಚಾರ (376) 63,64
ವಂಚನೆ (420) 316
ಲೈಂಗಿಕ ಕಿರುಕುಳ (354)(ಎ) 74
ಮಹಿಳೆ ಮೇಲೆ ಹಲ್ಲೆ (354)(ಬಿ) 75
ಕಳ್ಳತನ (378) 301
ಮಾನನಷ್ಟ ಮೊಕದ್ದಮೆ (499) 354
ಭಯೋತ್ಪಾದನ ಕಾಯ್ದೆ 111
ದೇಶದ್ರೋಹ/ಇದೇ ಮಾದರಿ ಇತರೆ (124(ಎ) 150
ಮಾನವ ಕಳ್ಳಸಾಗಣೆ (370) 141