Advertisement

ಪಾಲಿಕೆಯಿಂದ ಹೊಸತಾದ ಕಾಂಕ್ರೀಟ್‌ ಸ್ಲ್ಯಾಬ್ ಅಳವಡಿಕೆ

01:06 PM Jul 04, 2018 | |

ಮಹಾನಗರ: ನಗರದ ಜೋಡುಮಠ ರಸ್ತೆಯ ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಹಾಕಿರುವ ಕಾಂಕ್ರೀಟ್‌ ಹಲಗೆಯೊಂದು ಮುರಿದು ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ‘ಸುದಿನ’ ಈ ಹಿಂದೆ ಮಾಡಿದ ವರದಿಗೆ ಇದೀಗ ಸ್ಥಳೀಯಾಡಳಿತ ಸ್ಪಂದಿಸಿದೆ. ಕೇಂದ್ರ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಮಳೆ ನೀರು ಅಲ್ಲಿಯ ತ್ಯಾಜ ಸೇರಿ, ಹರಿದು ಭವಂತಿ ರಸ್ತೆಯಿಂದ ಸಾಗಿ ಬಂದು ಶ್ರೀ ರಾಘವೇಂದ್ರ ಬೃಂದಾವನದ ಬಳಿಯಿಂದ ಸಾಗಿ ತ್ರಿಶುಲೇಶ್ವರ ದೇವಸ್ಥಾನದ ಬಳಿಯಲ್ಲಿರುವ ಅಗಲವಾದ ಚರಂಡಿಯನ್ನು ಸೇರುತ್ತಿತ್ತು. ಈ ಚರಂಡಿಗೆ ಹಾಸಲಾಗಿದ್ದ ಕಾಂಕ್ರೀಟ್‌ ಹಲಗೆ ಮುರಿದಿತ್ತು. ಇದೇ ದೇವಸ್ಥಾನಕ್ಕೆ ದಿನಂಪ್ರತಿ ನೂರಾರು ಭಕ್ತರು ಆಗಮಿಸುತ್ತಿದ್ದು, ಅವರಿಗೂ ತೊಂದರೆ ಉಂಟಾಗುತ್ತಿತ್ತು.

Advertisement

ಈ ಬಗ್ಗೆ ;ಸುದಿನ’ ಜು. 2ರಂದು ‘ಜಿಲ್ಲಾಡಳಿತದ ಕಳಪೆ ಕಾಮಗಾರಿಗೆ ಇದೇ ಸಾಕ್ಷಿ’ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿದ್ದು, ಇದನ್ನು ಗಮನಿಸಿದ ಸ್ಥಳೀಯಾಡಳಿತ ಇದೀಗ ಇದೇ ಜಾಗದಲ್ಲಿ ಹೊಸತಾದ ಕಾಂಕ್ರಿಟ್‌ ಸ್ಲಾಬ್‌ ಅಳವಡಿಸಿದೆ. ಶ್ರೀ ರಾಘವೇಂದ್ರ ಬೃಂದಾವನದ ಮುಂದೆ ಹೊಸದಗಿನ ಅಳವಡಿಸಿರುವ ಕಾಂಕ್ರೀಟ್‌ ಹಲಗೆ.

Advertisement

Udayavani is now on Telegram. Click here to join our channel and stay updated with the latest news.

Next