Advertisement

ಹನಿ-ತುಂತುರು ನೀರಾವರಿ ಅಳವಡಿಸಿ

04:50 AM Jun 14, 2020 | Lakshmi GovindaRaj |

ಮಳವಳ್ಳಿ: ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬಹಳಷ್ಟು ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಹನಿ ಮತ್ತು ತುಂತುರು ನೀರಾವರಿ ಯೋಜನೆ ರೈತರಿಗೆ ಸಾಕಷ್ಟು ನೆರವಾಗಲಿದ್ದು, ಇದ್ದರಿಂದಾಗಿ ಉತ್ತಮ ಆದಾಯ  ಗಳಿಸಬಹುದು ಎಂದು ಮೈಸೂರು ಕಾಡಾ ಮುಖ್ಯ ಕಾರ್ಯಪಾಲಕ ಅಭಿಯಂತರೆ ಲಕ್ಷ್ಮೀ ಅವರು ತಿಳಿಸಿದರು.

Advertisement

ತಾಲೂಕಿನ ಬಿ.ಜಿ.ಪುರ ಹೋಬಳಿ ವ್ಯಾಪ್ತಿಯಲ್ಲಿ ಕಾವೇರಿ ನೀರಾವರಿ ನಿಗಮದಿಂದ ನಡೆಯುತ್ತಿರುವ ಪೂರಿಗಾಲಿ ಸಮಗ್ರ ಹನಿ  ಮತ್ತು ತುಂತುರು ನೀರಾವರಿ ಯೋಜನೆಯ ಕಾಮಗಾರಿಯನ್ನು ಮೈಸೂರು ಕಾಡಾ ಇಲಾಖೆ ಹಿರಿಯ ಅಧಿಕಾರಿಗಳ ಜತೆ ವೀಕ್ಷಿಸಿ ಮಾತ ನಾಡಿ, ಸರಿ ಸಮಯಕ್ಕೆ ಮಳೆಯಾಗದೇ ರೈತರು ವ್ಯವ ಸಾಯ ಮಾಡಲಾಗದೇ ಸಂಕಷ್ಟದಲ್ಲಿದ್ದಾರೆ.

ಈ ವೇಳೆ  ಸರ್ಕಾರ ಹನಿ ಮತ್ತು ತುಂತುರು ನೀರಾವರಿ ಯೋಜ ನೆಗೆ ಆದ್ಯತೆ ನೀಡುತ್ತಿದೆ. ಈಗಾಗಲೇ ನೀರಿನ ಅಭಾವ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುತ್ತದೆ. ಹೀಗಾಗಿ ರೈತರು ಸಂಬಂಧ ಪಟ್ಟ ಇಲಾಖೆಗಳಲ್ಲಿ  ಮಾಹಿತಿ ಪಡೆದು ಕೊಂಡು ಯೋಜನೆ ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗ ಬೇಕು ಎಂದು ಹೇಳಿದರು.

ಹನಿ ಮತ್ತು ತುಂತುರು ನೀರಾವರಿ ಯೋಜನೆ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಕೆಲ ಸಲಹೆ ಸೂಚನೆ  ನೀಡಿದರು. ರೈತರಿಂದ ಯೋಜ ನೆಯ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಕಾಡಾ ಸಹಾಯಕ ನಿರ್ದೇಶಕ ಧ್ರುವಕುಮಾರ್‌, ಸಹಕಾರ ಸಂಘಗಳ ಪ್ರಬಂಧಕಿ ರೇಖಾ, ಕಾಡಾ ಸಹಕಾರ ಅಧಿಕಾರಿ ಪಂಕಜ, ಕಾವೇರಿ ನೀರಾವರಿ ನಿಗಮದ  ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್‌, ಜೈನ್‌ ಕಂಪನಿಯ ಹಿರಿಯ ಬೇಸಾಯ ತಜ್ಞ ಪಿ.ವಿ ಜೋಶಿ, ಕಾರ್ತಿಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next