Advertisement

Rainy Season; ಅನಾರೋಗ್ಯದಿಂದ ದೂರ ಇರಲು ರೋಗ ನಿರೋಧಕ ಶಕ್ತಿ ಅಗತ್ಯ; ಈ ಆಹಾರಗಳು ಉತ್ತಮ

07:07 PM Jul 30, 2024 | ಕಾವ್ಯಶ್ರೀ |

ಹವಾಮಾನ ಬದಲಾವಣೆ ಆಗುವ ಸಂದರ್ಭ ಅನಾರೋಗ್ಯ ಉಂಟಾಗುವುದು ಸಾಮಾನ್ಯ ಸಂಗತಿ. ಅದರಲ್ಲೂ ಮಳೆಗಾಲದಲ್ಲಿ ಅನಾರೋಗ್ಯ ಎದುರಾಗುವುದು ಸಾಮಾನ್ಯ. ಅದ್ದರಿಂದ ಮಳೆಗಾಲದಲ್ಲಿ ಅನಾರೋಗ್ಯವನ್ನು ದೂರ ಮಾಡಬೇಕಾದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ.

Advertisement

ರೋಗನಿರೋಧಕ ಶಕ್ತಿ ನಮ್ಮ ದೇಹವನ್ನು ಸಾಂಕ್ರಾಮಿಕ ಜೀವಿಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಇರದಿದ್ದರೆ ನಮ್ಮ ದೇಹಕ್ಕೆ ಹಲವಾರು ರೀತಿಯ ಬ್ಯಾಕ್ಟೀರಿಯ, ವೈರಸ್ ಮತ್ತು ಇತರ ರೋಗಕಾರಕಗಳು ಆಕ್ರಮಿಸುತ್ತದೆ.

ಇದನ್ನು ತಡೆಯಲು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮ ಮಟ್ಟದಲ್ಲಿರುವುದು ಅಗತ್ಯವಾಗಿದೆ. ರೋಗ ನಿರೋಧಕ ಶಕ್ತಿ ನಮ್ಮ ದೇಹದಲ್ಲಿದ್ದರೆ ನಮಗೆ ರೋಗಗಳು ಪದೇ ಪದೇ ಕಾಡುವುದಿಲ್ಲ. ಆದ್ದರಿಂದ ನಾವು ಆರೋಗ್ಯವಾಗಿ ಇರಬೇಕೆಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗುತ್ತದೆ.

ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಆಗಾಗ ಜ್ವರ, ಕೆಮ್ಮು ಮತ್ತು ನೆಗಡಿ ಹಾಗೂ ಇತರ ಕಾಯಿಲೆಗಳು ಬರುತ್ತಿರುತ್ತದೆ. ಇಂತಹವರು ತಮ್ಮ-ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅತ್ಯಗತ್ಯ. ರೋಗಗಳು ಆಗಾಗ ಕಾಡುತ್ತಿರುವವರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಇದಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಬಹಳ ಮುಖ್ಯ.

ದೇಹದಲ್ಲಿರುವ ಎಲ್ಲಾ ಜೀವಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಪೌಷ್ಟಿಕಾಂಶ ಅಗತ್ಯ. ಖಾಯಿಲೆಗಳು ಬಂದರೆ ನಮ್ಮ ದೇಹದಲ್ಲಿರುವ ಪೌಷ್ಟಿಕಾಂಶ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಅಗತ್ಯವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು? ಯಾವ ಆಹಾರಗಳನ್ನು ಸೇವಿಸಬಹುದು ಎಂದು ತಿಳಿದುಕೊಳ್ಲಲು ಮುಂದೆ ಓದಿ…

Advertisement

ಮೊದಲನೆಯದಾಗಿ ನಮ್ಮ ಆಹಾರದ ಕ್ರಮ ಬದಲಾಯಿಸಿಕೊಳ್ಳಬೇಕು. ಫಾಸ್ಟ್‌ ಫುಡ್‌, ಜಂಕ್ ಫುಡ್ ಗಳ ಬದಲಾಗಿ ಸೊಪ್ಪು, ತರಕಾರಿ, ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು.

ಸಿಟ್ರಸ್‌ ಹಣ್ಣುಗಳಾದ ಕಿತ್ತಳೆ ಹಣ್ಣು, ಮೋಸಂಬಿ ಹಣ್ಣು, ನಿಂಬೆಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬೇಕು. ಹುಳಿ ಮತ್ತು ಸಿಹಿ ಮಿಶ್ರಣದ ಈ ಹಣ್ಣುಗಳು ನಮ್ಮ ದೇಹದಲ್ಲಿ ಸೋಂಕುಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ. ಇದರ ಸೇವನೆ ನಮಗೆ ಕೆಮ್ಮು, ಕಫ, ನೆಗಡಿಯಂತಹ ರೋಗಗಳಿಂದ ಕಾಪಾಡಲು ನಮ್ಮ ದೇಹದ ತಾಪಮಾನ ಹೆಚ್ಚಿಸಿ ರೋಗ ತಡೆಯಲು ಸಹಾಯ ಮಾಡುತ್ತದೆ.

ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿ, ಬಿಳಿ ರಕ್ತಕಣಗಳ ಸಂಖ್ಯೆಯನ್ನು ಅಭಿವೃದ್ಧಿಪಡಿಸಿ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಕೂಡಾ ಸಿಟ್ರಸ್‌ ಹಣ್ಣುಗಳು ಸಹಾಯ ಮಾಡುತ್ತದೆ.

ಮೊಟ್ಟೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.  ಇದರೊಂದಿಗೆ ಮೀನು ಮತ್ತು ಕೋಳಿ ಮಾಂಸ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಈ ಮೂರೂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮಾಂಸಹಾರಿಗಳಾಗಿದ್ದರೆ ಇದು ಉತ್ತಮ ಆಹಾರಗಳಲ್ಲಿ ಒಂದು.

ಮೊಳಕೆ ಕಾಳುಗಳು, ಬಾದಾಮಿ, ವಾಲ್ನಟ್ಸ್, ಗೋಡಂಬಿ, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳು, ಅಗಸೆ ಬೀಜಗಳನ್ನು ಸೇವಿಸುವುದರಿಂದ ಕೂಡಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ನಮ್ಮ ಆಹಾರದಲ್ಲಿ ಶುಂಠಿ, ಲವಂಗ, ಕರಿಮೆಣಸು, ದಾಲ್ಚಿನ್ನಿ ಮತ್ತು ಅರಿಶಿನವನ್ನು ಬಳಸಿ ಪ್ರತಿನಿತ್ಯ ಸೇವಿಸುವುದರಿಂದಲೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಹೂಕೋಸು, ಎಲೆಕೋಸು ಜಾತಿಗೆ ಸೇರಿದ ಬ್ರೊಕೋಲಿ ಕೂಡಾ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿರುವ ವಿಟಮಿನ್ ಎ, ಸಿ, ಇ ಮತ್ತು ಅನೇಕ ಬಗೆಯ ಅಂಶ ನಮ್ಮ ದೇಹಕ್ಕೆ ಉಪಯುಕ್ತವಾಗಿದೆ.

ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯಿಂದ ದೇಹಕ್ಕೆ ಬೇಕಾಗುವ ಶಕ್ತಿ ದೊರೆಯುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಮಾತ್ರವಲ್ಲದೇ ಹಸಿರು ತರಕಾರಿಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಸಲು ಬಯಸುವವರು ಮಸಾಲೆ ಹೆಚ್ಚಿರುವ, ಎಣ್ಣೆ ಪದಾರ್ಥ ಹೊಂದಿರುವ ಆಹಾರದಿಂದ ದೂರ ಇರುವುದು ಅಗತ್ಯ.

ಮಳೆಗಾಲ ಈಗಾಗಲೇ ಆರಂಭವಾಗಿದೆ. ರೋಗ ಬರದಂತೆ ತಡೆಯಲು ನಿಮ್ಮ ದೇಹದಲ್ಲಿಸ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ರೋಗಳಿಂದ ದೂರವಿದ್ದು, ಆರೋಗ್ಯವಾಗಿರಿ.

ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next