Advertisement

Drunk Driver: ಆಹಾರ ನೀಡಿಲ್ಲವೆಂದು ಸಿಟ್ಟಿಗೆದ್ದು ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಚಾಲಕ

03:12 PM Sep 07, 2024 | Team Udayavani |

ಪುಣೆ: ಹೋಟೆಲ್ ನಲ್ಲಿ ಆಹಾರ ಕೊಡಲು ನಿರಾಕರಿಸಿದ್ದಾರೆಂದು ಸಿಟ್ಟಿಗೆದ್ದ ಚಾಲಕನೋರ್ವ ತನ್ನ ಲಾರಿಯನ್ನೇ ಹೋಟೆಲ್ ಗೆ ನುಗ್ಗಿಸಿದ ಆಘಾತಕಾರಿ ಘಟನೆಯೊಂದು ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

Advertisement

ಪುಣೆ ಜಿಲ್ಲೆಯ ಇಂದ್ರಾಪುರದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಪುಣೆ-ಸೋಲಾಪುರ ಹೆದ್ದಾರಿಯ ಹಿಂಗಂಗಾವ್‌ನಲ್ಲಿರುವ ಹೊಟೇಲ್ ಗೋಕುಲ್ ರೆಸ್ಟೋರೆಂಟ್ ಗೆ ಲಾರಿ ಚಾಲಕ ಊಟ ಮಾಡಲೆಂದು ಬಂದಿದ್ದಾನೆ ಅಲ್ಲದೆ ತಡವಾಗಿದ್ದರಿಂದ ಹೋಟೆಲ್ ಸಿಬ್ಬಂದಿ ಊಟ ಮುಗಿದಿದೆ ಎಂದು ಹೇಳಿದ್ದಾರೆ ಇಷ್ಟಕ್ಕೆ ಸಿಟ್ಟಾದ ಲಾರಿ ಚಾಲಕ ತನ್ನ ಲಾರಿಯನ್ನು ಹೋಟೆಲ್ ಕಟ್ಟಡದಕ್ಕೆ ಡಿಕ್ಕಿ ಹೊಡೆದಿದ್ದಾನೆ ಅಲ್ಲದೆ ಹೋಟೆಲ್ ಹೊರಗಡೆ ಇದ್ದ ಕಾರು ಬೈಕುಗಳಿಗೆ ಗುದ್ದಿ ಜಖಂಗೊಳಿಸಿದ್ದಾನೆ ಇಷ್ಟಾಗುತ್ತಲೇ ಅಲ್ಲಿದ್ದ ಜನರು ಲಾರಿಯನ್ನು ನಿಲ್ಲಿಸಲು ಯತ್ನಿಸಿದ್ದಾರೆ ಈ ವೇಳೆ ನಿಲ್ಲಿಸದೆ ಮತ್ತೆ ಮತ್ತೆ ಹೋಟೆಲ್ ಕಟ್ಟಡಕ್ಕೆ ಲಾರಿಯನ್ನು ಡಿಕ್ಕಿ ಹೊಡೆಸಿದ್ದಾನೆ.

ಲಾರಿ ಚಾಲಕನ ಅವಾಂತ ಅಲ್ಲಿನ ಜನ ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಸಲಿಗೆ ಲಾರಿ ಚಾಲಕ ಪಾನಮತ್ತನಾಗಿದ್ದ ಎಂದು ಹೇಳಲಾಗಿದೆ ಕೊನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದನ್ನು ಕಂಡ ಲಾರಿ ಚಾಲಕ ಇನ್ನು ನನಗೆ ಉಳಿಗಾಲ ಇಲ್ಲ ಎಂದು ತಿಳಿದು ಲಾರಿಯನ್ನು ನಿಲ್ಲಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ, ಆದರೆ ಚಾಲಕನ ಆಟಾಟೋಪಕ್ಕೆ ಎರಡು ಕಾರು ಎರಡು ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದ್ದು ಲಾರಿ ಚಾಲಕನ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: Crime: ಸೈನೈಡ್ ಮಿಶ್ರಿತ ಜ್ಯೂಸ್‌ ನೀಡಿ ಚಿನ್ನಾಭರಣ ಲೂಟಿ; ಲೇಡಿ ಗ್ಯಾಂಗ್‌ ಅರೆಸ್ಟ್

Advertisement

Advertisement

Udayavani is now on Telegram. Click here to join our channel and stay updated with the latest news.