Advertisement
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಟಿ. ತಿಮ್ಮಪ್ಪ, ತಾಲೂಕಿನಲ್ಲಿ ವಿಪರೀತ ಮಳೆಯಿಂದ ಶೇ. 80ರಷ್ಟು ಅಡಕೆ ಸಂಪೂರ್ಣ ಕೊಳೆರೋಗದಿಂದ ನಷ್ಟವಾಗಿದ್ದು, ಬೆಳೆಗಾರರು ತೀವ್ರ [ಆತಂಕದಲ್ಲಿದ್ದಾರೆ.
ಕಳೆದ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಸ್ಥಿರೀಕರಣಗೊಳಿಸಿದ 5 ಸಾವಿರಕ್ಕೂ ಹೆಚ್ಚು ಕಡತಗಳು ಈತನಕ ವಿಲೇವಾರಿ ಮಾಡಿಲ್ಲ. ಫಲಾನುಭವಿಗಳಿಗೆ ಈತನಕ ಹಕ್ಕುಪತ್ರ ನೀಡಿಲ್ಲ.
ಕಂದಾಯ ಭೂಮಿಯಲ್ಲಿ ಮಂಜೂರಾದ ಭೂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡುವ ಕಾರ್ಯದಲ್ಲಿ ಅರಣ್ಯ ಇಲಾಖೆಗೆ ಅಭಿಪ್ರಾಯಕ್ಕಾಗಿ ಕಡತಗಳನ್ನು ಕಳಿಸಲಾಗಿದೆ. ಅರಣ್ಯ ಇಲಾಖೆ ಅಭಿಪ್ರಾಯ ಕೇಳಬೇಕು ಎನ್ನುವ ಅಗತ್ಯವಿಲ್ಲದಿದ್ದರೂ ಅನಗತ್ಯವಾಗಿ ಅರಣ್ಯ ಇಲಾಖೆಗೆ ಕಳಿಸಿಕೊಡಲಾಗಿದೆ. ಈ ಕಡತಗಳನ್ನು ತಕ್ಷಣ ವಾಪಸ್ ತರಿಸಿಕೊಂಡು ಫಲಾನುಭವಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು. ಎಪಿಎಂಸಿ ಅಧ್ಯಕ್ಷ ಕೆ. ಹೊಳೆಯಪ್ಪ ಮಾತನಾಡಿ, ತಾಲೂಕಿನಲ್ಲಿ ಸುಮಾರು 10 ಸಾವಿರ ಹೆಕ್ಟೇರ್ ನಷ್ಟು ತೋಟಗಳಲ್ಲಿ ಅಡಕೆ ಬೆಳೆ ಹಾನಿಯಾಗಿದೆ.
Related Articles
ಪರಿಹಾರ ನೀಡದೆ ಹೋದಲ್ಲಿ ಉಗ್ರವಾಗದ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಲಸೆ ಚಂದ್ರಪ್ಪ ಮಾತನಾಡಿದರು. ನಗರ ಬ್ಲಾಕ್ ಅಧ್ಯಕ್ಷ ಮಕೂಲ್ ಅಹ್ಮದ್, ಕಾರ್ಯದರ್ಶಿ ಮಹಾಬಲಕೌತಿ, ಡಿ. ದಿನೇಶ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುಧಾಕರ ಕುಗ್ವೆ, ಪ್ರವೀಣ ಬಣಕಾರ್, ಎಪಿಎಂಸಿ ಸದಸ್ಯ ರವಿ ಹುಣಾಲಮಡಿಕೆ, ಪ್ರಮುಖರಾದ ಕನ್ನಪ್ಪ ಮುಳಕೇರಿ, ಗುಡ್ಡೆಮನೆ ನಾಗರಾಜ್, ಜ್ಯೋತಿ, ಆನಂದ ಭೀಮನೇರಿ, ಅಣ್ಣಪ್ಪ ಸೂರನಗದ್ದೆ, ಷಣ್ಮುಖ, ಲಕ್ಷ್ಮೀಕಾಂತ ಇನ್ನಿತರರು ಇದ್ದರು.