Advertisement
ಈ ಮಾಹಿತಿಯನ್ನು ಸ್ವತಃ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ನೀಡಿದೆ. ಐಎಂಎಫ್ ಬಾಂಗ್ಲಾದೇಶದ ತಲಾ ಜಿಡಿಪಿ 1,888 ಡಾಲರ್ (ಸುಮಾರು 1,38,400 ರೂ.) ಆಗಿದ್ದರೆ, ಭಾರತದಲ್ಲಿ ಅದು 1,877 ಡಾಲರ್ (ಸುಮಾರು 1,37,594 ರೂ.) ಆಗಿರಬಹುದು ಎಂದು ಹೇಳಿದೆ.
Related Articles
ಈ ವರ್ಷ ಭಾರತದ ತಲಾ ಜಿಡಿಪಿ 10% ರಷ್ಟು ಕುಸಿದಿದೆ. ಆದರೆ ಬಾಂಗ್ಲಾದೇಶದ ತಲಾ ಜಿಡಿಪಿಯು ಶೇ. 4ರ ಬೆಳವಣಿಗೆಯನ್ನು ಕಂಡಿದೆ. ತಲಾ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ವಿಷಯದಲ್ಲಿ ಕೆಲವು ವರ್ಷಗಳ ಹಿಂದಿನ ವರೆಗೂ ಭಾರತ ಬಾಂಗ್ಲಾದೇಶಕ್ಕಿಂತಲೂ ಮೇಲಿತ್ತು. ಆದರೆ ದೇಶದಲ್ಲಿ ತ್ವರಿತ ರಫ್ತಿನಿಂದಾಗಿ, ಅದರ ಬೆಳವಣಿಗೆ ಗಮನಾರ್ಹವಾಗಿ ಬದಲಾಗಿದೆ. ಅಲ್ಲದೆ ಭಾರತದ ಉಳಿತಾಯ ಮತ್ತು ಹೂಡಿಕೆ ಕಡಿಮೆಯಾಗಿದೆ.
Advertisement
ಪಾಕಿಸ್ಥಾನ ಮತ್ತು ನೇಪಾಳಕ್ಕಿಂತ ಭಾರತ ಮುಂದೆಐಎಂಎಫ್ ನ ಅಂದಾಜು ಲೆಕ್ಕಾಚಾರಗಳ ಪ್ರಕಾರ ಭಾರತವು ಪಾಕಿಸ್ಥಾನ ಮತ್ತು ನೇಪಾಳಕ್ಕಿಂತ ಮುಂದೆ ಇದೆ. ಆದರೆ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ದಕ್ಷಿಣ ಏಷ್ಯಾ ಭಾರತಕ್ಕಿಂತ ಮುಂದೆ ಇದೆ. ಭಾರತದ ಸಾಧನೆ ಕುಸಿಯಬಹುದು ಎಂದಿರುವ ವರದಿ ನೇಪಾಳ ಮತ್ತು ಭೂತಾನ್ ಆರ್ಥಿಕತೆಗಳು ಈ ವರ್ಷ ಬೆಳೆಯುವ ನಿರೀಕ್ಷೆಯಿದೆ ಎಂದು ಹೇಳಿದೆ. 2021ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿಯಲ್ಲಿ 9.6% ಕುಸಿತ ಕಾಣಲಿದೆ ಎಂದು ವಿಶ್ವ ಬ್ಯಾಂಕ್ ಮುನ್ಸೂಚನೆ ನೀಡಿದೆ. ಸ್ಪೇನ್ ಮತ್ತು ಇಟಲಿಯ ಅನಂತರ ಭಾರತದ ಜಿಡಿಪಿಯಲ್ಲಿ 10.3% ರಷ್ಟು ಇಳಿಕೆ ಕಂಡುಬಂದಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಗಳ ನಡುವಿನ ದೊಡ್ಡ ಕುಸಿತವಾಗಲಿದೆ ಎಂದು ಐಎಂಎಫ್ ವರದಿಯಲ್ಲಿ ತಿಳಿಸಿದೆ. ಚೀನ 2020 ರಲ್ಲಿ ಶೇ. 5.7ರಷ್ಟು ಕೊರತೆ ಕಾಣಲಿದೆ ಎಂದಿದೆ. ಭಾರತ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ವೈರಸ್ ಹರಡುವ ಪ್ರಮಾಣ ಹೆಚ್ಚಾಗಲಿದ್ದು, ಇದು ಆರ್ಥಿಕ ಚೇತರಿಕೆಗೆ ಅಪಾಯ ತಂದೊಡ್ಡಲಿದೆ ಎಂದು ಹೇಳಿದೆ. ಈ ದೇಶಗಳ ಆರ್ಥಿಕತೆಯು ಪ್ರವಾಸೋದ್ಯಮ ಮತ್ತು ರಫ್ತನ್ನು ಅವಲಂಬಿಸಿದೆ. 1990-91ರ ಬಿಕ್ಕಟ್ಟಿನ ಬಳಿಕ 2020ರಲ್ಲಿ ಭಾರತೀಯ ಆರ್ಥಿಕತೆಯು ಹೆಚ್ಚು ಪರಿಣಾಮ ಬೀರಬಹುದು ಎಂದು ವರದಿ ಹೇಳಿದೆ. ಶ್ರೀಲಂಕಾದ ಬಳಿಕ ಭಾರತವು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕೆಟ್ಟ ಆರ್ಥಿಕತೆಯಾಗುವ ಸಾಧ್ಯತೆಯಿದೆ ಎಂದು ಅದು ವರದಿ ಕಳವಳ ವ್ಯಕ್ತಪಡಿಸಿದೆ. ಆದಾಗ್ಯೂ 2021ರಲ್ಲಿ ಭಾರತದಲ್ಲಿ ಚೇತರಿಕೆ ಕಾಣಲಿದೆ ಎಂದು ಐಎಂಎಫ್ ವರದಿ ತಿಳಿಸಿದೆ.