Advertisement

ನೂತನ ಕೃಷಿ ನೀತಿಗಳಿಗೆ ಐಎಂಎಫ್ ಮೆಚ್ಚುಗೆ

02:05 PM Jan 16, 2021 | Team Udayavani |

ವಾಷಿಂಗ್ಟನ್‌: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳನ್ನು ವಿಶ್ವ ಹಣಕಾಸು ನಿಧಿ ಮುಕ್ತಕಂಠದಿಂದ ಶ್ಲಾ ಸಿದೆ. “ಭಾರತದ ಕೃಷಿರಂಗದ ಅಭಿವೃದ್ಧಿಗೆ ಹೊಸ
ಕಾಯ್ದೆಗಳು ನಿರ್ಣಾಯಕ ಪಾತ್ರ ವಹಿಸಲಿವೆ’ ಎಂದು ತಿಳಿಸಿದೆ.

Advertisement

ಐಎಂಎಫ್ ನ ಸಂಪರ್ಕ ನಿ ರ್ದೇಶಕ ಗೆರ್ರಿ ರೈಸ್‌ ಅವರು ಸುದ್ದಿಗೋಷ್ಠಿಯಲ್ಲಿ ಹೊಸದಿಲ್ಲಿಯ ರೈತರ ಪ್ರತಿಭಟನೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, “ಮಾರಾಟಗಾರರೊಂದಿಗೆ ನೇರ ಒಪ್ಪಂದ ಮಾಡಿಕೊಳ್ಳಲು ರೈತರಿಗೆ ಇದರಿಂದ ಸಾಧ್ಯವಾಗಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪ ಗಣನೀಯವಾಗಿ ತಗ್ಗಿ, ಮಾರಾಟದ ಆದಾಯದಲ್ಲಿ ಅಧಿಕ ಪಾಲನ್ನು ರೈತರು ಹೊಂದಲಿದ್ದಾರೆ.

ಅಲ್ಲದೆ, ಗ್ರಾಮೀಣ ಭಾಗದ ಅಭಿವೃದ್ಧಿಗೂ ಈ ಕಾಯ್ದೆಗಳು ನೆರವಾಗಲಿವೆ’ ಎಂದು ಪ್ರತಿಪಾದಿಸಿದ್ದಾರೆ. ವಿವಾದಗಳಿಗೂ ಕಿವಿಗೊಡಿ: “ಕೃಷಿ ನೀತಿಗಳ ಪರಿಣಾಮ
ದಿಂದ ಖಚಿತವಾಗಿ ಉದ್ಯೋಗ ಮಾರುಕಟ್ಟೆಯೂ ಪ್ರಗತಿ ಕಾಣಲಿದೆ. ಆದರೆ ಈ ಸುಧಾರಣೆಗಳ ಪ್ರಯೋಜನವು ಕೃಷಿನೀತಿಗಳ ಅನುಷ್ಠಾನದ ಕಾಲಘಟ್ಟ ಮತ್ತು
ಪರಿಣಾಮಕಾರತ್ವ, ಅದರ ವಿಮರ್ಶೆಗಳನ್ನೂ ಅವಲಂಬಿಸಿದೆ.

ಹೀಗಾಗಿ ಕಾಯ್ದೆ ಕುರಿತು ಎದ್ದಿರುವ ವಿವಾದಗಳ ಬಗ್ಗೆಯೂ ಗಮನ ಕೇಂದ್ರೀಕರಿಸಬೇಕು. ಈ ಹೊಸ ವ್ಯವಸ್ಥೆ ಅನುಷ್ಠಾನ ವೇಳೆ ಅನಗತ್ಯ ತೊಂದರೆ ನೀಡುವವರ ಅಪಾಯವೂ ಎದುರಾಗುವ ಸಾಧ್ಯತೆ ಇದೆ’ ಎಂದೂ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next