Advertisement

‌Movies: ಇಲ್ಲಿದೆ ಐಎಂಡಿಬಿ ವರ್ಷದ ಜನಪ್ರಿಯ ಹಾಗೂ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

03:43 PM Jul 24, 2024 | Team Udayavani |

ಮುಂಬಯಿ: ಈ ವರ್ಷ ಭಾರತೀಯ ಸಿನಿಮಾರಂಗದಲ್ಲಿ ಬಹು ನಿರೀಕ್ಷಿತ ಸಿನಿಮಾಗಳು ತೆರೆಕಾಣಲಿವೆ. ಇದರಲ್ಲಿ ಈಗಾಗಲೇ ಕೆಲ ಸಿನಿಮಾಗಳು ರಿಲೀಸ್‌ ಆಗಿದೆ. ಇನ್ನು ಕೆಲ ಸಿನಿಮಾಗಳು ಇದೇ ವರ್ಷದಲ್ಲಿ ತೆರೆಕಾಣಲಿವೆ.

Advertisement

ಮುಂದೆ ರಿಲೀಸ್‌ ಆಗಬೇಕಿರುವ ಕೆಲ ಸಿನಿಮಾಗಳ ದಿನಾಂಕ ಕೂಡ ನಿಗದಿಯಾಗಿದ್ದು, ಇನ್ನು ಕೆಲ ಸಿನಿಮಾಗಳು ರಿಲೀಸ್‌ ಹೊಸ್ತಿಲಿನಲ್ಲಿ ನಿಂತಿವೆ. ಐಎಂಡಿಬಿ (Internet Movie Database) ಇದುವರೆಗೆ ತೆರೆಕಂಡ ವರ್ಷದ ಜನಪ್ರಿಯ ಹಾಗೂ ಮುಂದೆ ತೆರೆಕಾಣಲಿರುವ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದುವರೆಗೆ ತೆರೆಕಂಡ ಜನಪ್ರಿಯ ಸಿನಿಮಾಗಳು: ಟಾಪ್‌ 10 ಜನಪ್ರಿಯ ಸಿನಿಮಾಗಳಲ್ಲಿ ಸೌತ್‌ ಸಿನಿಮಾಗಳ ಪಟ್ಟಿಯೇ ಹೆಚ್ಚಿದೆ. ಇನ್ನುಳಿದಂತೆ ಹಿಂದಿ ಸಿನಿಮಾಗಳು ಈ ಪಟ್ಟಿಯಲ್ಲಿ ಸೇರಿವೆ. ಸೂಪರ್‌ ಹಿಟ್‌ ಆಗಿ ಕೋಟಿ ಗಳಿಸಿದ ಚಿತ್ರಗಳು ಸೇರಿದಂತೆ ಕಡಿಮೆ ಬಜೆಟ್‌ ನಲ್ಲಿ ಅಧಿಕ ಲಾಭ ಪಡೆದ ಸಿನಿಮಾಗಳೂ ಈ ಪಟ್ಟಿಯಲ್ಲಿವೆ.

ಕಲ್ಕಿ 2898 – ಎಡಿ

ಮಂಜುಮ್ಮೆಲ್ ಬಾಯ್ಸ್

Advertisement

ಫೈಟರ್

ಹನುಮಾನ್

ಸೈತಾನ್

ಲಪತಾ ಲೇಡಿಸ್

ಅರ್ಟಿಕಲ್ 370

ಪ್ರೇಮಾಲು

ಆವೇಶಮ್

ಮುಂಜ್ಯ 

ಮುಂದೆ ಬರಲಿರುವ ಬಹುನಿರೀಕ್ಷಿತ ಸಿನಿಮಾಗಳು: ವರ್ಷ ಮೊದಲಾರ್ಧದಲ್ಲಿ ʼಕಲ್ಕಿʼಯಂತಹ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ದೊಡ್ಡ ಸದ್ದು ಮಾಡಿದ್ದು, ದ್ವಿತೀಯಾರ್ಧದಲ್ಲಿ ಅಂಥದ್ದೇ ಸಿನಿಮಾಗಳು ರಿಲೀಸ್ ಆಗಲಿರುವ ಪಟ್ಟಿಯಲ್ಲಿ ಸೌತ್‌ ಸಿನಿಮಾಗಳೇ ಹೆಚ್ಚಿವೆ. ಇದರಲ್ಲಿ ಕಾಲಿವುಡ್‌, ಟಾಲಿವುಡ್‌ ಸೂಪರ್‌ ಸ್ಟಾರ್‌ ಗಳ ಚಿತ್ರಗಳು ಸೇರಿವೆ.

ಪುಷ್ಪ: ದಿ ರೂಲ್ – 2

ದೇವರ ಪಾರ್ಟ್‌ – 1

ವೆಲ್ ಕಂ ಟು ದಿ ಜಂಗಲ್

ದಿ ಗ್ರೇಟಿಸ್ಟ್‌ ಆಫ್‌ ಆಲ್‌ ಟೈಮ್

ಸಿಂಗಮ್ ಅಗೇನ್

ಭೂಲ್ ಭುಲೈಯಾ 3

ತಂಗಲಾನ್

ಔರಾನ್ ಮೇ ಕಹಾನ್ ದಮ್ ಥಾ

ಸ್ತ್ರೀ 2

ವಿಶ್ವಾದ್ಯಂತ ಐಎಂಡಿಬಿಗೆ ಮಾಸಿಕ 250 ಮಿಲಿಯನ್‌ಗಿಂತಲೂ ಹೆಚ್ಚು ಜನ ಭೇಟಿ ನೀಡುತ್ತಾರೆ. ಇದರಲ್ಲಿ ಸಿನಿಮಾಗಳಿಗೆ ರೇಟಿಂಗ್‌ ನೀಡುವ ಅವಕಾಶವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next