ಲಕ್ನೋ:ದೇಶಾದ್ಯಂತ ತ್ರಿವಳಿ ತಲಾಖ್ ನಿಷೇಧದ ಕಾನೂನನ್ನು ವಿರೋಧಿಸಿದ ವಿಪಕ್ಷಗಳ ವಿರುದ್ಧ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ, ತಮಗೆ ಮತ ಹಾಕಿದವರ ಏಳಿಗೆ ವಿಪಕ್ಷಗಳಿಗೆ ಬೇಕಾಗಿಲ್ಲ ಎಂದು ಆರೋಪಿಸಿದರು.
ಇದನ್ನೂ ಓದಿ:ಮಂಗಳೂರು ವಿಶ್ವವಿದ್ಯಾನಿಲಯ: ಅಂಕಪಟ್ಟಿ ಸಿಗದೆ ಪದವಿ ವಿದ್ಯಾರ್ಥಿಗಳಿಗೆ ಸಂಕಷ್ಟ!
ಪಂಜಾಬ್ ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ದೇಶದ ಪ್ರತಿಯೊಂದು ಮೂಲೆಯಿಂದಲೂ ಮುಸ್ಲಿಮ್ ಸಹೋದರಿಯರು ಮತ್ತು ತಾಯಂದಿರ ಆಶೀರ್ವಾದ ಸ್ವೀಕರಿಸುತ್ತಿದ್ದೇನೆ. ಏಕೆಂದರೆ ಅವರನ್ನು ರಕ್ಷಿಸಲು ನಾನು ದೊಡ್ಡ ಸೇವೆಯನ್ನು ಮಾಡಿದ್ದೇನೆ ಎಂದರು.
ದಿಢೀರ್ ವಿಚ್ಛೇದನದಂತಹ ಪ್ರಕರಣದ ನಂತರ ನನ್ನ ತಾಯಂದಿರು ಮತ್ತು ಸಹೋದರಿಯರ ಸ್ಥಿತಿಯ ಬಗ್ಗೆ ಊಹಿಸಿಕೊಳ್ಳಿ. ಅವರು ಎಲ್ಲಿಗೆ ಹೋಗಬೇಕು?. ಇಂತಹ ವಿಚ್ಛೇದನಗಳು ನಡೆದ ನಂತರ ಅವರನ್ನು ತವರು ಮನೆಗೆ ಕಳುಹಿಸಿಕೊಡುತ್ತಿದ್ದರು ಎಂದು ಹೇಳಿದರು. ನಾನು ಕೇವಲ ಮತಕ್ಕಾಗಿ, ನನ್ನ ಕುರ್ಚಿಗಾಗಿ ಅಥವಾ ದೇಶಕ್ಕಾಗಿ ಮಾಡಿಲ್ಲ, ಕೇವಲ ಜನರ ಶ್ರೇಯೋಭಿವೃದ್ಧಿಗಾಗಿ ಕೈಗೊಂಡ ನಿರ್ಧಾರವಾಗಿತ್ತು. ಆದರೆ ಅದನ್ನು ವಿಪಕ್ಷಗಳು ವಿರೋಧಿಸಿದವು ಎಂದು ಆರೋಪಿಸಿದರು.
ತ್ರಿವಳಿ ತಲಾಖ್ ದಬ್ಬಾಳಿಕೆಯಿಂದ ನಾವು ಮುಸ್ಲಿಮ್ ಸಹೋದರಿಯರನ್ನು ಮುಕ್ತಗೊಳಿಸಿದ್ದೇವೆ. ಯಾವಾಗ ಮುಸ್ಲಿಮ್ ಸಹೋದರಿಯರು ಬಿಜೆಪಿಯನ್ನು ಬಹಿರಂಗವಾಗಿ ಬೆಂಬಲಿಸಲು ಆರಂಭಿಸಿದರೋ, ಆಗ ಈ ಮತದ ಮೇಲೆ ಕಣ್ಣಿಟ್ಟವರಿಗೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದಕ್ಕಾಗಿ ಮುಸ್ಲಿಮ್ ಹೆಣ್ಣುಮಕ್ಕಳನ್ನು ಬಿಜೆಪಿ ಬೆಂಬಲಿಸುವುದನ್ನು ತಡೆಯಲು ಪ್ರಯತ್ನಿಸಿದರು. ನಮ್ಮ ಸರಕಾರ ಮುಸ್ಲಿಮ್ ಮಹಿಳೆಯರ ಪರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಮುಸ್ಲಿಮ್ ಮಹಿಳೆಯರನ್ನು ನಾನು ಶ್ಲಾಘಿಸಿರುವುದು ಹೊಟ್ಟೆ ನೋವು ತರಲು ಕಾರಣವಾಗಿದೆ. ಉತ್ತರಪ್ರದೇಶ ಸೇರಿದಂತೆ ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ.