Advertisement

Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್‌ ಘೋಷಣೆ

08:20 AM Nov 07, 2024 | Team Udayavani |

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷೀಯ ಚುನಾ­ವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಡೊನಾಲ್ಡ್‌ ಟ್ರಂಪ್‌, ಯುದ್ಧದ ನಿಲ್ಲಿಸುವ ಪ್ರಸ್ತಾವವನ್ನು ಮಾಡಿದ್ದಾರೆ.

Advertisement

“ನಾನು ಯುದ್ಧ ಆರಂಭ ಮಾಡಲು ಹೋಗಲಾರೆ, ಯುದ್ಧವನ್ನು ನಿಲ್ಲಿಸಲು ಮುಂದಾ­ಗು­ತ್ತೇನೆ’ ಎಂದು ಘೋಷಣೆ ಮಾಡಿದ್ದಾರೆ. ಜತೆಗೆ ಜು.13ರಂದು ಪ್ರಚಾರದ ವೇಳೆ ತಮ್ಮ ಮೇಲೆ ನಡೆದಿದ್ದ ದಾಳಿ ಸ್ಮರಿಸಿದ ಅವರು “ಮಹತ್ವವಾಗಿರುವ ಯಾವುದೋ ಉದ್ದೇಶಕ್ಕೆ ದೇವರು ನನ್ನನ್ನು ಬದುಕಿಸಿದ್ದಾನೆ’ ಎಂದರು.

ಫ್ಲೋರಿಡಾದಲ್ಲಿ ವಿಜಯೋತ್ಸವ ಭಾಷಣ ಮಾಡಿದ ಟ್ರಂಪ್‌, ರಷ್ಯಾ- ಉಕ್ರೇನ್‌ ಹಾಗೂ ಇಸ್ರೇಲ್‌-ಹಮಾಸ್‌-ಲೆಬೆನಾನ್‌ ನಡುವಿನ ಯುದ್ಧದ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿ,”ನಾನು ಯುದ್ಧವನ್ನು ಆರಂಭಿಸುವುದಿಲ್ಲ, ನಿಲ್ಲಿಸುತ್ತೇನೆ” ಎಂದಿದ್ದಾರೆ. ಇನ್ನು ಅಮೆರಿಕದ ಗಡಿ ಭಾಗವನ್ನು ಕೂಡಲೇ ಬಂದ್‌ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಕ್ರಮ ವಲಸಿಗರು ಪ್ರವೇಶಿಸದಂತೆ ನೋಡಿಕೊಳ್ಳಲಾಗುವುದು. ತೆರಿಗೆಗಳ ಹೊರೆ ಇಳಿಸುತ್ತೇನೆ’ ಎಂದು ಘೋಷಿಸಿದರು.

ಉಸಿರಿರುವರೆಗೂ ಹೋರಾಟ: ಕಳೆದ 4 ವರ್ಷ ದ­ಲ್ಲಾಗಿರುವ ವಿಭಜನೆಯನ್ನು ಸರಿಪಡಿಸುವ ಕಾಲ ಇದಾಗಿದ್ದು, ಒಂದಾಗುವ ಸಮಯ ಬಂದಿದೆ. ಕೆಲವು ಸಮಯದವರೆಗೆ ನಾವು ದೇಶವನ್ನು ಒಟ್ಟಾಗಿ ಮುನ್ನಡೆಸಬೇಕಿದೆ. ನಾವಿಂದು ಇತಿಹಾಸ ವನ್ನು ರಚಿಸಿದ್ದೇವೆ. ಸುರಕ್ಷಿತ-­ಸಮೃದ್ಧ ಅಮೆರಿಕವನ್ನಾಗಿ ರೂಪಿಸುವವರೆಗೆ ನಾನು ವಿಶ್ರಮಿಸಲಾರೆ. ನನ್ನ ದೇಹದಲ್ಲಿ ಉಸಿರಿರುವವರೆಗೂ ನಿಮಗಾಗಿ ಹೋರಾಡುತ್ತೇನೆ ಎಂದರು.

ಇದನ್ನೂ ಓದಿ: US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next