ಗುರುದಾಸ್ಪುರದಲ್ಲಿ ಬಿಜೆಪಿ ಪರ ಪ್ರಚಾರಮಾಡುತ್ತೇನೆ ಎಂದ ವಿನೋದ ಖನ್ನಾ ಪತ್ನಿ
ಹೊಸದಿಲ್ಲಿ : ನನಗೆ ಗುರುದಾಸ್ ಪುರದ ಟಿಕೆಟನ್ನು ಬಿಜೆಪಿ ನೀಡಿಲ್ಲ.ಆದರೂ ನಾನು ಮೋದಿ ಅವರ ಪರ ಕೆಲಸ ಮಾಡುತ್ತೇನೆ ಎಂದು ವಿನೋದ್ ಖನ್ನಾ ಪತ್ನಿ ಕವಿತಾ ಖನ್ನಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕವಿತಾ, ನಾನು ಪಕ್ಷದ ನಿಲುವನ್ನು ಅರ್ಥ ಮಾಡಿಕೊಂಡಿದ್ದೇನೆ.ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ನಿರ್ಧಾರ ಅಂತಿಮ,ಆದರೆ ಆಯ್ಕೆಗೆ ಒಂದು ದಾರಿ ಇದೆ. ಅಭ್ಯರ್ಥಿ ಆಯ್ಕೆ ಮಾಡಿದರೀತಿ ನನ್ನನ್ನು ಕೈ ಬಿಟ್ಟಂತೆಮತ್ತು ತಿರಸ್ಕರಿಸಿದಂತೆ ಆಯಿತು.ನನ್ನನ್ನು ಅತ್ಯಲ್ಪ ಭಾವದಿಂದ ನೋಡಿದಂತೆ ಆಯಿತು ಎಂದರು.
ಇದೇ ವೇಳೆನನಗೆ ಟಿಕೆಟ್ ಸಿಗದಿರುವುದನ್ನು ವೈಯಕ್ತಿಕವಾಗಿ ಪರಿಗಣಿಸುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ. ನನ್ನ ಸಂಪೂರ್ಣ ತ್ಯಾಗವನ್ನು ಅವರಿಗಾಗಿ ಮಾಡುತ್ತೇನೆ ಎಂದಿದ್ದಾರೆ.
ವಿನೋದ್ ಖನ್ನಾ ಅವರ ಆಕಾಲಿಕ ನಿಧನದಿಂದಾಗಿ ಗುರುದಾಸ್ಪುರ ಕ್ಷೇತ್ರದಲ್ಲಿ ಉಪಚುನಾವಣೆ ಎದುರಾಗಿತ್ತು. ಅಘಾತಕಾರಿ ಎಂಬಂತೆ ಬಿಜೆಪಿ ಕ್ಷೇತ್ರವನ್ನು ಕಳೆದುಕೊಂಡಿತ್ತು.