Advertisement

ನಾನೂ ಮೋದಿ ತರಹ, ನನಗೆ ಪತ್ನಿ ಇದ್ದಾಳೆ, ಅವರಿಗೆ ಇಲ್ಲ …

12:57 PM Mar 16, 2019 | Team Udayavani |

ಯಾದಗಿರಿ: ನಾನೂ ಪ್ರಧಾನಿ ಮೋದಿ ಅವರ ತರಹ.ನನಗೆ ಪತ್ನಿ ಇದ್ದಾಳೆ, ಅವರಿಗೆ ಪತ್ನಿ ಇಲ್ಲ.ಇಷ್ಟೇ ವ್ಯತ್ಯಾಸ ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಬಾಬು ರಾವ್‌ ಚಿಂಚನಸೂರ್‌ ಹೇಳಿಕೆ ನೀಡಿದ್ದಾರೆ. 

Advertisement

ಶನಿವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ಧಾಳಿ  ನಡೆಸುವ ವೇಳೆ ಈ ಹೇಳಿಕೆ ನೀಡಿದ್ದಾರೆ. 

ಡಾ.ಉಮೇಶ್‌ ಜಾಧವ್‌ ಅವರನ್ನು ನೀವು ಗೆಲ್ಲಿಸಿದರೆ ಅವರು ಕೇಂದ್ರ ಸಚಿವರಾಗುತ್ತಾರೆ ಎಂದೂ ಹೇಳಿದರು.

ಇದೇ ವೇಳೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪರ್ವತದಂತೆ, ಅದು ನಿಧಾನಕ್ಕೆ ಕುಸಿಯುತ್ತದೆ ಎಂದರು. 

ಕೋಲಿ ಸಮುದಾಯದ ಪ್ರಭಾವೀ ನಾಯಕರಾಗಿರುವ ಬಾಬುರಾವ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸಿಡಿದೆದ್ದು ಬಿಜೆಪಿ ಸೇರ್ಪಡೆಯಾಗಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next