Advertisement

ವಿಡಿಯೋದಲ್ಲಿರುವುದು ನಾನೇ, ಸಂಪೂರ್ಣ ಬೆತ್ತಲಾಗಿಲ್ಲ..! ಸಂಜನಾ

12:27 PM Jul 19, 2017 | Team Udayavani |

ಬೆಂಗಳೂರು: ಪಾರ್ಟ್‌ 2 ಚಿತ್ರದ ಸೆನ್ಸಾರ್‌ ಕತ್ತರಿ ಹಾಕಿದ್ದ ಬೆತ್ತಲು ದೃಶ್ಯ ಭಾರೀ ಸುದ್ದಿ ಮಾಡಿದ ಬಳಿಕ ನಟಿ ಸಂಜನಾ ಬುಧವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನಡೆಸಿದ್ದಾರೆ. 

Advertisement

ಚಿತ್ರದ ನಿರ್ದೇಶಕರನ್ನೇ ಕೇಳಿ ಹೇಳಿಕೆ ನೀಡಬೇಕೆಂದು ಇನ್ನಷ್ಟು ಕುತೂಹಲ ಹೆಚ್ಚಿಸಿದ್ದ ಸಂಜನಾ ಇಂದು ನಿರ್ದೇಶಕರು ಬೇರೆ ಚಿತ್ರದ ಶೂಟಿಂಗ್‌ಗೆ ಹೋಗಿದ್ದಾರೆ ಹೀಗಾಗಿ ಸುದ್ದಿಗೋಷ್ಠಿಗೆ ಬಂದಿಲ್ಲ ಎಂದರು. 

ಹೌದು, ಆ ದೃಶ್ಯದಲ್ಲಿ ಇರುವುದು ನಾನೆ.ನಾನು ಅಲ್ಲಿ ಸಂಪೂರ್ಣ ಬೆತ್ತಲಾಗಿಲ್ಲ. ಬೆನ್ನನ್ನು ಮಾತ್ರ ಸಂಪೂರ್ಣ ತೋರಿಸಿದ್ದೆ. ಸಣ್ಣ ಶಾರ್ಟ್‌ ಹಾಕಿ ಎದುರುಗಡೆಯೂ ಬಟ್ಟೆ ಹಾಕಿಕೊಂಡಿದ್ದೆ ಎಂದು ಲ್ಯಾಪ್‌ಟಾಪ್‌ನಲ್ಲಿದ್ದ ಶೂಟಿಂಗ್‌ ವೇಳೆ ಕ್ಲಿಕ್ಕಿಸಿದ ಫೋಟೋಗಳನ್ನು ತೋರಿಸಿದರು. 

ಈ ವಿಡಿಯೋವನ್ನು ಲೀಕ್‌ ಮಾಡಿದವರು ಯಾರಂತ ನನಗೆ ಗೊತ್ತಿಲ್ಲ.ನಾನು ಅಭಿನಯಿಸಿದ್ದೇ ಬೇರೆ, ತೆರೆಯ ಮೇಲೆ ಬಂದಿರುವುದೇ ಬೇರೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕೆ.ಮಂಜು, ನಿರ್ಮಾಪಕಿ ಕವಿತಾ ಲಂಕೇಶ್‌ ಅವರು ಉಪಸ್ಥಿತರಿದ್ದು ಸಂಜನಾ ಪರ ಮಾತನಾಡಿದರು. 

Advertisement

ಈ ಬಗ್ಗೆ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘಕ್ಕೆ ದೂರು ನೀಡಿ, ನಿರ್ದೇಶಕನ ಬಳಿ ಸ್ಪಷ್ಟನೆ ಕೇಳುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಸಂಜನಾಗೆ ಆದ ರೀತಿ ಬೇರೆ ಯಾವ ನಟಿಗೂ ಆಗಬಾರದು,ಇದು ಚೀಪ್‌ ಪಬ್ಲಿಸಿಟಿ ಗಿಮಿಕ್‌ ಅಲ್ಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next