Advertisement

ನಾನು ಶತಮಾನದ ರಸ್ತೆ: ದಯಮಾಡಿ ಕಾಂಕ್ರೀಟ್‌ ಭಾಗ್ಯ ನೀಡಿ…

06:25 AM Jan 11, 2018 | Team Udayavani |

ಕುಂದಾಪುರ: ನಾನು ಶತಮಾನದ ಇತಿಹಾಸವಿರುವ ರಸ್ತೆಯಾಗಿದ್ದು, ಬಸ್ರೂರಿನ ಹೃದಯ ಭಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಾಗಿದೆ. ಆದರೂ ನನ್ನ ಬಗ್ಗೆ ಜನಪ್ರತಿನಿಧಿರಾಗಲಿ ಅಥವಾ ಸಾರ್ವಜನಿಕರಾಗಲಿ ಯಾರಿಗೂ ನನ್ನ ಬಗ್ಗೆ ಕಾಳಜಿಯಿಲ್ಲ. ದಯಮಾಡಿ ನನ್ನ ದುರಸ್ತಿ ಮಾಡಿ ಹೀಗೆ ಬರೆದಿರುವ ಕಳಕಳಿಯ ಬ್ಯಾನರ್‌ ಒಂದು ಬಸ್ರೂರು ಪೇಟೆಯಲ್ಲಿ ಕಾಣಿಸಿಕೊಂಡಿದೆ.


ಇದು ಹೊಸಂಗಡಿಯಿಂದ ಕುಂದಾಪುರ ಸಂಪರ್ಕಿಸುವ ಹತ್ತಿರದ ಮಾರ್ಗವಾದ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ಮುಖ್ಯ ರಸ್ತೆಯ ದುಸ್ಥಿತಿ. 

Advertisement

ಹಲವು ಸಮಯಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾದರೂ, ಇತ್ತ ಯಾವ ಜನಪ್ರತಿನಿಧಿಗಳು ಗಮನವೇ ಹರಿಸಿಲ್ಲ ಎನ್ನುವ ನೋವು ಈ ಬ್ಯಾನರ್‌ನಲ್ಲಿದೆ. 

ಆದರೆ ಈ ಬ್ಯಾನರ್‌ ಯಾರೂ ಹಾಕಿದ್ದು ಎಂದು ಯಾರಿಗೂ ಗೊತ್ತಿಲ್ಲ. ರಿಕ್ಷಾ ಚಾಲಕರಲ್ಲಿ ಕೇಳಿದರೆ ನಮಗೆ ಗೊತ್ತಿಲ್ಲ. ಆದರೆ ಇದರಿಂದಲಾದರೂ ರಸ್ತೆ ದುರಸ್ತಿಗೆ ಕಾಯಕಲ್ಪ ಸಿಗಲಿ ಎನ್ನುತ್ತಾರೆ.

ಕುಂದಾಪುರಕ್ಕೆ ಹತ್ತಿರದ ಮಾರ್ಗ
ಹೊಸಂಗಡಿ-ಬಸ್ರೂರು- ಕೋಣಿ ಮಾರ್ಗವಾಗಿ ಕುಂದಾಪುರಕ್ಕೆ ಸುಮಾರು 9 ಕಿ.ಮೀ. ದೂರವಿದ್ದರೆ, ಹೊಸಂಗಡಿ-ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯಾಗಿ ಆನಗಳ್ಳಿ- ಸಂಗಮ್‌ ಜಂಕ್ಷನ್‌ ಆಗಿ ಕುಂದಾಪುರಕ್ಕೆ ಕೇವಲ 6 ಕಿ.ಮೀ. ಅಂತರವಿದೆ. ಬಸ್ರೂರಿನಿಂದ ಕುಂದಾಪುರಕ್ಕೆ ಬರಲು ಹೆಚ್ಚಿನವರಿಗೆ ಇದು ಹತ್ತಿರದ ಮಾರ್ಗವಾಗಿದ್ದರೂ, ಸಂಪೂರ್ಣ ಹದಗೆಟ್ಟ ಈ ರಸ್ತೆಯಿಂದ ಯಾವುದೇ ಪ್ರಯೋಜನವಾಗ್ತಿಲ್ಲ. 

ಹೊಸ ಡಾಮರು ಬಿಡಿ, ಪ್ಯಾಚ್‌ವರ್ಕ್‌ ಹಾಕದೇ ತುಂಬಾ ವರ್ಷವಾಗಿದೆ. ಈ ರಸ್ತೆ ದುರಸ್ತಿ ಯಾವತ್ತೋ ಆಗಬೇಕಿತ್ತು. ಇಲ್ಲಿನ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ, ಜನರ ನಿರಾಸಕ್ತಿಯಿಂದಾಗಿ ರಸ್ತೆ ದುರಸ್ತಿಗೆ ಕಾಲ ಕೂಡಿಬಂದಿಲ್ಲ. 
 – ಪ್ರಭಾಕರ ಖಾರ್ವಿ ಬಸ್ರೂರು,  
ಸ್ಥಳೀಯರು

Advertisement

ಹದಗೆಟ್ಟ ರಸ್ತೆಯಿಂದ 25 ರೂ. ಇದ್ದ ಬಾಡಿಗೆಯನ್ನು 30- 35 ರೂ. ಗೆ ಏರಿಸಿದರೆ ಜನ ಪ್ರಶ್ನಿಸುತ್ತಾರೆ. ಇದರಿಂದ ರಿಕ್ಷಾ ಚಲಾಯಿಸುವುದೇ ಕಷ್ಟವಾಗಿದೆ. ಇನ್ನೆಷ್ಟು ದಿನ ನಾವು ಈ ಕಷ್ಟ ಅನುಭವಿಸಬೇಕೋ ಗೊತ್ತಿಲ್ಲ. 3 ತಿಂಗಳ ಹಿಂದೆ ದೇವಸ್ಥಾನದ ಬಳಿ ಸ್ವಲ್ಪ ಪ್ಯಾಚ್‌ವರ್ಕ್‌ ಹಾಕಿದರೂ, ಕಳಪೆ ಕಾಮಗಾರಿಯಿಂದಾಗಿ ಅದು ಅಷ್ಟೇ ಬೇಗ ಎದ್ದುಹೋಗಿದೆ. 
 – ರಾಜು ಶೆಟ್ಟಿ ಬಸ್ರೂರು,
ರಿಕ್ಷಾ ಚಾಲಕ

Advertisement

Udayavani is now on Telegram. Click here to join our channel and stay updated with the latest news.

Next