Advertisement

ವಿದ್ಯಾರ್ಥಿಗಳಿಂದ ಸಂವಿಧಾನದ ಮಹತ್ವ ವಿವರಣೆ

08:32 PM Jan 29, 2021 | Team Udayavani |

ಹುಳಿಯಾರು: ಹುಳಿಯಾರು-ಕೆಂಕೆರೆ ಬಿಎಂಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಸಾಂಸ್ಕೃತಿಕ ಸಂಘದಿಂದ ಅಂತಿಮ ಬಿಎ ವಿದ್ಯಾರ್ಥಿ ಗಳಿಗೆ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಅಲ್ಲದೆ ವಿದ್ಯಾರ್ಥಿ ಗಳಿಗಾಗಿ ಗಣರಾಜ್ಯೋತ್ಸವದ ಭಾಷಣ ದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು.

Advertisement

ಭಾಷಣ ಸ್ಪರ್ಧೆಯಲ್ಲಿ ಸಂವಿಧಾನ ಮತ್ತು ಮಹಿಳೆ, ಸಂವಿಧಾನದ ಮಹತ್ವ, ಹಕ್ಕು ಮತ್ತು ಕರ್ತವ್ಯಗಳು, ಸಂವಿಧಾನ ರಚನೆ – ಒಂದು ನೋಟ, ಸಂವಿಧಾನ ಮತ್ತು ಅಂಬೇಡ್ಕರ್‌- ಹೀಗೆ ಸಂವಿಧಾನಸಂಬಂಧಿ ವಿಭಿನ್ನ ವಿಷಯಗಳ ಮೇಲೆ ವಿದ್ಯಾರ್ಥಿಗಳು ಮಾತನಾಡಿದರು. ಸಂವಿಧಾನ ಪೀಠಿಕೆಯನ್ನು ವಿದ್ಯಾ ರ್ಥಿಗಳಿಗೆ ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾ ಯಿತು.

ಅಂತಿಮ ಬಿ.ಎ. ವಿದ್ಯಾರ್ಥಿಗಳ ಮೆಂಟರ್‌ ಪೊ. ಮೋಹನ್‌ ಕುಮಾರ್‌ ಅವರು ಸಂವಿಧಾನದ ಪೀಠಿಕೆಯನ್ನು ಅರ್ಥೈಸಿದರು. ಉಪನ್ಯಾಸಕರಾದ ಕುಮಾ ರ ಸ್ವಾಮಿ ಅವರು ಸಂವಿಧಾನ ರಚನೆಯ ಹಿನ್ನೆಲೆಯನ್ನು ವಿವರಿಸಿದರು. ಪ್ರಾಚಾರ್ಯರಾದ ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತನಾಡಿ ಗಾಂಧಿ, ಅಂಬೇಡ್ಕರ್‌ ಮೊದಲಾದ ಮಹನೀಯರ ಶ್ರಮದಿಂದಾಗಿ ಇಂದು ನಾವು ಗಣರಾಜ್ಯವನ್ನು ಅನುಭವಿಸುತ್ತಿದ್ದೇವೆ.

ಇದನ್ನೂ ಓದಿ:ಪ್ರಶ್ನಿಸಿದಾಗ ಉತ್ತರ ಸಿಗಲು ಸಾಧ್ಯ

ರಾಜಪ್ರಭುತ್ವದಲ್ಲೂ ಇರಬಹುದಾದ ಕೆಲವೊಂದು ಒಳ್ಳೆಯ ಅಂಶಗಳೂ ಸೇರಿ  ದಂತೆ ದೇಶ ವಿದೇಶಗಳ ಸಂವಿಧಾನವನ್ನು ಪರಾಮರ್ಶಿಸಿ ನಮ್ಮ ಸಂವಿಧಾನವನ್ನು ರೂಪಿಸಲಾಗಿದೆ ಎಂದರು. ಸವಿತಾ ಎಸ್‌.ಟಿ. ಪ್ರೇರಣಾ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಿವ್ಯ ಕೆ. ಕಾರ್ಯಕ್ರಮವನ್ನು ನಿರೂಪಿಸಿದರೆ,ಚೈತ್ರಾ ಹೆಚ್‌.ಡಿ. ಸ್ವಾಗತಿಸಿದರು, ಆಯೇಷಾ ಬಿ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next