Advertisement

ಕಲಾವಿದರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ

05:49 PM Nov 10, 2021 | Team Udayavani |

ಹುಣಸಗಿ: ಕಲ್ಯಾಣ ಕರ್ನಾಟಕ ಭಾಗದ ಕಲಾವಿದರು ಕೂಡ ರಾಜ್ಯ ಮಟ್ಟದಲ್ಲಿ ಮಿಂಚುವಂತಾಗಬೇಕು. ಅಲ್ಲದೆ ಸರಕಾರ ಈ ಭಾಗದ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ನಳ್ಳಿ ಹೇಳಿದರು.

Advertisement

ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ಹಮ್ಮಿಕೊಂಡ ತಾಲೂಕು ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಲಾವಿದರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಭಾಗದ ಕಲಾವಿದರ ಬಗ್ಗೆ ಬಹಳಷ್ಟು ನಿರ್ಲಕ್ಷ್ಯ ವಹಿಸಿಕೊಂಡು ಬರಲಾಗುತ್ತಿದೆ. ಈ ಭಾಗದಲ್ಲಿ ಅದ್ಭುತ ಕಲಾವಿದರು ಇದ್ದರೂ ರಾಜ್ಯಮಟ್ಟದಲ್ಲಿ ಗುರುತಿಸುವಲ್ಲಿ ತಾತ್ಸಾರ ಮನೋಭಾವನೆ ತೋರಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕ.ಕ.ಕ. ಒಕ್ಕೂಟದ ಕೇಂದ್ರ ಸಮಿತಿ ಅಧ್ಯಕ್ಷ ವಿಜಯಕುಮಾರ ಸೊನಾರೆ ಕಾರ್ಯಕ್ರಮ ಉದ್ಘಾಟಿಸಿ, ಕಲಾವಿದರು ಒಗ್ಗಟಾದಾಗ ಮಾತ್ರ ಸರಕಾರದ ವಿವಿಧ ಯೋಜನೆ ಮತ್ತು ಪ್ರಶಸ್ತಿ ಪುರಸ್ಕಾರ ದೊರೆಯಲಿವೆ. ವಿವಿಧ ಜನಮನ ಸೆಳೆಯುವ ಕಲೆಗಳು ಮತ್ತು ಕಲಾಕಾರರು ನಮ್ಮ ಭಾಗದಲ್ಲಿದ್ದಾರೆ. ಆದರೆ, ಅವರಿಗೆ ಸೂಕ್ತ ವೇದಿಕೆ ಇಲ್ಲ. ಸರಕಾರದ ಮಟ್ಟದಲ್ಲಿಯೂ ಅವರಿಗೆ ಪ್ರಾಶಾಸ್ತ್ಯ ನೀಡುತ್ತಿಲ್ಲ. ಹಾಗಾಗಿ ಇಲ್ಲಿನ ಕಲಾ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪರಿಚಯಿಸುವುದಲ್ಲದೆ ಕಲಾವಿದರ ಬೆಳೆವಣಿಗೆಯೇ ಒಕ್ಕೂಟದ ಉದ್ದೇಶವಾಗಿದೆ ಎಂದರು.

ಈ ವೇಳೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಪವನ ದೇಶಪಾಂಡೆ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಪ್ರಶಸ್ತಿ ಪಡೆದ ಶಿವಶರಣ ಕಟ್ಟಿಮನಿ ಅವರನ್ನು ಗೌರವಿಸಲಾಯಿತು. ನಂತರ ವಿವಿಧ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸಿದ್ದಲಿಂಗಯ್ಯ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು. ಮುಖಂಡ ತಿಪ್ಪಣ್ಣಗೌಡ ಬಿರಾದಾರ, ಒಕ್ಕೂಟದ ಜಿಲ್ಲಾಧ್ಯಕ್ಷ ವಿಶಾಲ ಸಿಂಧೆ, ಅಮರೇಶ ಹಸ್ಮಕಲ್‌, ವಿ.ಎಂ. ಬೆಳ್ಳುಬ್ಬಿ, ಶಿವಪ್ಪ ಹೆಬ್ಟಾಳ, ಸಂಗನಗೌಡ ಧನರೆಡ್ಡಿ ಸೇರಿದಂತೆ ವಿವಿಧ ಕಲಾವಿದರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next