ಬೆಳ್ತಂಗಡಿ: ಬಡತನದ ನಡುವೆ ಗೋ ಸಾಕಣೆ ಮಾಡಿ ಮಕ್ಕಳ ವಿಧ್ಯಾಭ್ಯಾಸ ನೋಡಿಕೊಳ್ಳುತ್ತಿದ್ದ ಕುಟುಂಬದ ಆಧಾರಸ್ತಂಭ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಕುಟುಂಬ ನೆರವಿನ ನಿರೀಕ್ಷೆಯಲ್ಲಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ನಿವಾಸಿ ಚಿತ್ರಾ ಶೆಟ್ಟಿ (45) ಎ. 15ರಂದು ಬ್ರೈನ್ ಹ್ಯಾಮರೇಜ್ ಆಗಿ ಮಂಗಳೂರಿನ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಸುಮಾರು 1.5 ಲಕ್ಷ ರೂ.ನಷ್ಟು ವೈದ್ಯಕೀಯ ಖರ್ಚು ಆಗಿದೆ.
ಚಿತ್ರಾ ಶೆಟ್ಟಿ ಅವರು ತಮ್ಮ 10 ಸೆಂಟ್ಸ್ ಜಾಗದಲ್ಲಿ ಗೋ ಸಾಕಣಿ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ದಂಪತಿಯ ಮೂವರು ಮಕ್ಕಳಲ್ಲಿ ಒಬ್ಬ ಮಗಳು ಅಂಗವಿಕಲೆ, ಶಾಲೆಗೆ ಹೋಗುತ್ತಿದ್ದ ಒಬ್ಬ ಪುತ್ರ ಇತ್ತೀಚೆಗೆ ಅಪಘಾತಕ್ಕೀಡಾಗಿ ಸಾವಿರಾರು ರೂ. ಖರ್ಚಾಗಿತ್ತು. ಮತ್ತೂಬ್ಬ ಪುತ್ರನಿಗೆ ಇನ್ನೂ 4 ವರ್ಷ ವಯಸ್ಸು. ಚಿತ್ರಾ ಸಹೋದರನೂ ಇತ್ತೀಚೆಗೆ ಮೃತಪಟ್ಟಿದ್ದು, ಕುಟುಂಬ ಮಾನಸಿಕವಾಗಿ ಜರ್ಜರಿತವಾಗಿತ್ತು. ಚಿತ್ರಾ ಚಿಕಿತ್ಸೆಗೆ ಲಕ್ಷಾಂತರ ರೂ. ಅಗತ್ಯವಿದೆ. ಅವರ ಮತ್ತೋರ್ವ ಸಹೋದರ ಹಣ ಹೊಂದಿಸಲು ಕಷ್ಟಪಡುತ್ತಿದ್ದಾರೆ.
ನೆರವು ನೀಡಲಿಚ್ಚಿಸುವವರು ವಿದ್ಯಾಪ್ರಸಾದ್ (ಚಿತ್ರಾ ಸಹೋದರ), ಖಾತೆ ನಂ.: 520101009921921,
ಐಎಫ್‌ಎಸ್ಸಿ ಕೋಡ್: ಸಿಒಆರ್ ಪಿ0000224, ಕಾರ್ಪೊರೇಶನ್ ಬ್ಯಾಂಕ್ ಬೊಳುವಾರು ಪುತ್ತೂರು ಇಲ್ಲಿ ಹಣ ಜಮೆ ಮಾಡಬಹುದು.