Advertisement
ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿ ಮತ್ತು ಟ್ರಕ್ ಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದರೂ ಚಾಲಕರು ಕಳೆದ ಆರು ತಿಂಗಳಿಂದ ಹಗಲು ರಾತ್ರಿ ಇದೇ ರಸ್ತೆಯಲ್ಲಿ ಬೃಹತ್ ಗಾತ್ರದ ಲಾರಿಗಳನ್ನು ಓಡಿಸುತ್ತಿದ್ದರೂ ತಾಲೂಕು ಆಡಳಿತ ಹಾಗೂ ಗ್ರಾಮೀಣ ಪೊಲೀಸರ ಮೌನ ಹಲವು ಅನುಮಾನ ಹುಟ್ಟಿಸಿದೆ.
Related Articles
Advertisement
ಹೆಚ್ಚಿದ ಅಪಘಾತಗಳು: ಗಂಗಾವತಿ, ಕಡೆ ಬಾಗಿಲು ಹೊಸಪೇಟೆ, ಹುಲಿಗಿ ಕಡೆ ಹೋಗುವ ರಸ್ತೆಯಲ್ಲಿ ಲಾರಿ ಮತ್ತು ಅಕ್ರಮ ಮರಳು ಟ್ರಕ್ ಗಳ ಸಂಚಾರದಿಂದ ಕಳೆದ ಆರು ತಿಂಗಳಿಂದ ಈ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.
ಸಾವು-ನೋವುಗಳು ಸಂಭವಿಸಿದ್ದರೂ ಪೊಲೀಸ್ ಇಲಾಖೆ ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿಗಳ ಸಂಚಾರಕ್ಕೆ ತಡೆಯೊಡ್ಡು, ಹೊಸಪೇಟೆ ಮತ್ತು ರಸ್ತೆ ಅಗಲೀಕರಣ ಕುರಿತು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಶೀಘ್ರವೇ ಕಾಮಗಾರಿ ಆರಂಭ ಮಾಡಬೇಕಿದೆ.
ಹೆಸರಿಗೆ ಮಾತ್ರ ರಾಜ್ಯ ಹೆದ್ದಾರಿ: ರಾಜ್ಯ ಸರ್ಕಾರ ಗಂಗಾವತಿ, ಆನೆಗೊಂದಿ, ಮುನಿರಾಬಾದ್ ರಸ್ತೆಯನ್ನು 130 ರಾಜ್ಯ ಹೆದ್ದಾರಿ ಎಂದು ಘೋಷಣೆ ಮಾಡಿದ್ದರೂ ರಾಜ್ಯ ಹೆದ್ದಾರಿಗೆ ಇರಬೇಕಾದ ಸೌಕರ್ಯಗಳನ್ನು ನೀಡಿಲ್ಲ. ಇದರಿಂದಾಗಿ ಅನೇಕ ಅಪಘಾತಗಳು ನಡೆಯುತ್ತಿವೆ.
ಹೆಡ್ನಾಳ್ ಗಂಗಾವತಿ ಮಧ್ಯೆ ರಸ್ತೆ ಬಹಳ ಇಕ್ಕಟ್ಟಾಗಿದ್ದು, ಅಗಲೀಕರಣ ಮಾಡುವ ಕುರಿತು ಈಗಾಗಲೇ ಪ್ರಸ್ತಾವನೆಗಳು ನಡೆದಿದ್ದು, ಕಳೆದ ಎರಡು ವರ್ಷಗಳ ಹಿಂದೆ ಘೋಷಣೆ ಮಾಡಲಾಗಿದೆ.
ಲಾರಿ ಟ್ರಕ್ ಗಳ ಸಂಚಾರ ನಿಷೇಧಕ್ಕೆ ಸೂಚನೆ: ಗಂಗಾವತಿ, ಕಡೆ ಬಾಗಿಲು, ಹೊಸಪೇಟೆ, ಆನೆಗೊಂದಿ ಮಾರ್ಗದಲ್ಲಿ ಭಾರಿ ಗಾತ್ರದ ಲಾರಿ ಮತ್ತು ಅಕ್ರಮ ಮರಳು ತುಂಬಿದ ಟ್ರಕ್ ಗಳ ಓಡಾಟದಿಂದ ಸಂಚಾರ ಸಂಪೂರ್ಣ ಹದಗೆಟ್ಟಿದೆ. ನಿತ್ಯವೂ ಸಾವಿರಾರು ವಾಹನಗಳು ಮತ್ತು ಪ್ರವಾಸಿಗರು ಸಂಚರಿಸುವ ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳನ್ನು ನಿಷೇಧ ಮಾಡಿದ್ದರೂ ಕೂಡಾ ವಾಹನಗಳು ಸಂಚರಿಸತ್ತಿವೆ.
ಈ ರಸ್ತೆಯಲ್ಲಿ ಹೋಗುವುದನ್ನು ಕೂಡಲೇ ತಡೆಯುವಂತೆ ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ರಸ್ತೆ ಅಭಿವೃದ್ಧಿ ಕುರಿತಂತೆ ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಯಂತೆ ಈ ರಸ್ತೆಯ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಉದಯವಾಣಿಗೆ ತಿಳಿಸಿದ್ದಾರೆ.