Advertisement

ಸಹ-ವಾಸದ ಮಕ್ಕಳಿಗೂ ಪಾಲು! ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

12:53 AM Jun 15, 2022 | Team Udayavani |

ಹೊಸದಿಲ್ಲಿ: ಹಿಂದೂ ಕುಟುಂಬದ ಆಸ್ತಿ ಹಂಚಿಕೆಗೆ ಸಂಬಂಧಿಸಿ ಮಂಗಳವಾರ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

Advertisement

ವಿವಾಹ ಬಂಧನಕ್ಕೆ ಒಳಗಾಗದೇ ದೀರ್ಘ‌ಕಾಲ ಸಹಬಾಳ್ವೆ ನಡೆಸಿರುವವರಿಗೆ ಹುಟ್ಟುವ ಮಕ್ಕಳೂ ಆಸ್ತಿಯ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮದುವೆಯಾಗದೆ ಸಹಬಾಳ್ವೆ ನಡೆಸಿದ ದಂಪತಿಯ ಅಕ್ರಮ ಸಂತಾನವೆಂದು ಕರೆಸಲ್ಪಟ್ಟ ಪುತ್ರನಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿ ಕೇರಳ ಹೈಕೋರ್ಟ್‌ ತೀರ್ಪನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಜತೆಗೆ ಪರಸ್ಪರ ಮದುವೆ ಆಗಿರದಿದ್ದರೂ ದೀರ್ಘ‌ಕಾಲ ಒಟ್ಟಿಗೇ ಜೀವಿಸಿ ತಮ್ಮ ಸಂಬಂಧವು ಗಟ್ಟಿ ಯಾಗಿದೆಯೆಂದು ಸಾಬೀತುಪಡಿಸಿದ್ದಾರೆ. ಹೀಗಾಗಿ ಅವರ ಮಗ ಪೂರ್ವಜರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್‌ ನ ನ್ಯಾಯಪೀಠ ಪ್ರತಿಪಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next