ಹುಣಸೂರು: ಶುಂಠಿಯ ಚೀಲದ ಕೆಳಗೆ ಅಕ್ರಮವಾಗಿ ಕೇರಳ ಕಡೆಗೆ ಸಾಗಿಸುತ್ತಿದ್ದ 8 ಲಕ್ಷರೂ ಬೆಲೆ ಬಾಳುವ ಬೀಟೆ ನಾಟಾವನ್ನು ವಶ ಪಡಿಸಿಕೊಳ್ಳುವಲ್ಲಿ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಶನಿವಾರ ಸಂತೆಯ ಹರೀಶ್ ಪೊನ್ನಪ್ಪರಿಗೆ ಸೇರಿದ ಮಹೇಂದ್ರ ಮಿನಿ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ.
ಶನಿವಾರ ಸಂತೆಯಿಂದ ಹುಣಸೂರು ಹೆಚ್.ಡಿ.ಕೋಟೆ ಮಾರ್ಗವಾಗಿ ಬಾವಲಿ ಚೆಕ್ ಪೋಸ್ಟ್ ಮೂಲಕ ಕೇರಳಕ್ಕೆ ಬೀಟೆ ನಾಟಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿ.ಎಫ್.ಓ. ಸೀಮಾ ಬಿ.ಎ.ಹಾಗೂ ಎಸಿಎಫ್ ಅನುಷಾರ ಮಾರ್ಗದರ್ಶನದಲ್ಲಿ ಆರ್ ಎಫ್ ಓ ನಂದಕುಮಾರ್ ನೇತೃತ್ವದ ತಂಡ ಹುಣಸೂರು-ಹೆಚ್.ಡಿ. ಕೋಟೆ ರಸ್ತೆಯ ನಲ್ಲೂರು ಪಾಲ ಜಂಕ್ಷನ್ ಬಳಿಯಲ್ಲಿ ಹೊಂಚು ಹಾಕಿ ವಾಹನವನ್ನು ತಡೆಯುತ್ತಿದ್ದಂತೆ ವಾಹನ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಕಿಡ್ನಾಪ್ ಆಗಿದ್ದ ಬೇಕರಿ ಮಾಲೀಕಗೆ ರಕ್ಷಣೆ ಒದಗಿಸಲು ಆಗ್ರಹಿಸಿ ಮನವಿ
ವಾಹನದಲ್ಲಿ ಸುಮಾರು 7 ಲಕ್ಷರೂ ಬೆಲೆ ಬಾಳುವ ಹಳೆಯ 7ಬೀಟೆ ಮರದ ನಾಟಾಗಳು ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಯಿತೆಂದು ಡಿಎಫ್ ಓ ಸೀಮಾ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಆರ್.ಎಫ್. ಓ .ನಂದಕುಮಾರ್. ಡಿ.ಆರ್.ಎಫ್.ಓ.ಗಳಾದ ಮಲ್ಲಿಕಾರ್ಜುನ. ಹರೀಶ್ ದೇವಯ್ಯ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.