Advertisement
ಪಟ್ಟಣದ 17 ವಾರ್ಡ್‌ಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ಜಿಲ್ಲಾಡಳಿತ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಪಟ್ಟಣಕ್ಕೆ ಪ್ರತಿದಿನ ನಾಲ್ಕೈದು ತಾಸು ನೀರು ಸರಬರಾಜು ಮಾಡುತ್ತಿದೆ. ಪ.ಪಂ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 17 ಕೊಳವೆ ಬಾವಿಗಳಲ್ಲಿನ ನೀರು ಕೋಡಿಕೊಪ್ಪ, ಮಲ್ಲಾಪುರ, ದ್ಯಾಂಪುರ, ಕೋಚಲಾಪುರ, ತೋಟಗಂಟಿ ಗ್ರಾಮಗಳಿಗೆ ನಿತ್ಯ ನೀರು ಸರಬರಾಜು ಮಾಡಲಾಗುತ್ತಿದೆ. ಪಟ್ಟಣದಲ್ಲಿ ಇನ್ನೂಳಿದ 12 ವಾರ್ಡ್‌ಗಳಿಗೆ ಐದು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.
Related Articles
Advertisement
ಕ್ರಮಕ್ಕೆ ಜನರ ಒತ್ತಾಯಅನೇಕರು ಅನಧಿಕೃತ ನಳ ಬಳಕೆ ಮಾಡುವುದರಿಂದ ನಿಯಮಿತವಾಗಿ ಕರ ಪಾವತಿಸುವ ನಮಗೆ ಕಡಿಯುವ ನೀರು ಸರಿಯಾಗಿ ಬರುವುದಿಲ್ಲ. ನೀರು ಬಿಡುವ ಅವಧಿಯಲ್ಲೂ ಕಾಯುತ್ತ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ. ಅನಧಿಕೃತ ನಳಗಳಿಂದ ಲಕ್ಷಾಂತರ ಲೀಟರ್ ನೀರು ನಷ್ಟವಾಗುತ್ತದೆ. ಕೂಡಲೇ ಪ.ಪಂ ಅಧಿಕಾರಿಗಳು ಅನಧಿಕೃತ ಹಾಗೂ ವಿದ್ಯುತ್ ಮೋಟರ್ ಬಳಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಎಂದು ಪಟ್ಟಣದ ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ಪಟ್ಟಣ ಸೇರಿದಂತೆ ಮಜರೆ ಗ್ರಾಮಗಳಲ್ಲಿ ಅನಧಿಕೃತ ನಳ ಸಂಪರ್ಕ ಹೊಂದಿರುವವರಿಗೆ ಈಗಾಗಲೇ ಪಪಂ ವತಿಯಿಂದ ನೋಟಿಸ್ ನೀಡಲಾಗುತ್ತಿದೆ. ಅವರಲ್ಲಿ ಈಗಾಗಲೇ ಕೆಲವರು ಬಂದು ಹಣ ಪಾವತಿಸಿ ಅಧಿಕೃತಪಡಿಸಿಕೊಳ್ಳುತ್ತಿದ್ದಾರೆ. ನೋಟಿಸ್ ನೀಡಿದ ಏಳು ದಿನದ ಒಳಗಾಗಿ ಅನಧಿಕೃತವಿರುವ ನಳಗಳನ್ನು ಅಧಿಕೃತ ಪಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
– ಎಂ.ಎ. ನೂರುಲ್ಲಾಖಾನ್, ಪಪಂ ಪ್ರಭಾರಿ ಮುಖ್ಯಾಧಿಕಾರಿ