Advertisement

Bageshwar; ಉತ್ತರಾಖಂಡದ ಪರ್ವತದಲ್ಲಿ ಅಕ್ರಮ ದೇಗುಲ ನಿರ್ಮಾಣ!

09:14 PM Jul 16, 2024 | Team Udayavani |

ಡೆಹ್ರಾಡೂನ್‌: ಪರ್ವತ ಪ್ರದೇಶದ 16500 ಅಡಿ ಎತ್ತರದಲ್ಲಿ ಸ್ವಯಂ ಘೋಷಿತ ದೇವಮಾನವನೊಬ್ಬ ಸ್ಥಳೀಯ ಆಡಳಿತದ ಗಮನಕ್ಕೂ ಬರದಂತೆ ಅಕ್ರಮವಾಗಿ ದೇಗುಲ ನಿರ್ಮಿಸಿರುವ ಘಟನೆ ಉತ್ತರಾಖಂಡದ ಬಾಗೇಶ್ವರ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಸುಂದರದುಂಗ ಪರ್ವತ ಪ್ರದೇಶದಲ್ಲಿರುವ “ದೇವಿ ಕುಂಡ’ದ ಬಳಿ ಬಾಬಾ ಯೋಗಿ ಚೈತನ್ಯ ಆಕಾಶ್‌ ದೇಗುಲ ನಿರ್ಮಿಸಿದ್ದಾರೆ. ತನ್ನ ಕನಸಿನಲ್ಲಿ ದೇವಿ ಭಗವತಿ ಪ್ರತ್ಯಕ್ಷಳಾಗಿ ಕುಂಡದ ಬಳಿ ದೇಗುಲ ನಿರ್ಮಾಣಕ್ಕೆ ಆದೇಶಿಸಿದ್ದಾಳೆಂದು ಪರ್ವತ ಪ್ರದೇಶದಲ್ಲಿರುವ ಗ್ರಾಮಸ್ಥರಿಗೆ ಯೋಗಿ ಹೇಳಿದ್ದಾರೆ.

ಬಳಿಕ ಗ್ರಾಮಸ್ಥರ ನೆರವನ್ನೇ ಪಡೆದು ಸೂಕ್ಷ್ಮ ಪ್ರದೇಶದಲ್ಲಿ ದೇಗುಲ ನಿರ್ಮಿಸಿದ್ದಾರೆ. ಪ್ರತಿ 12 ವರ್ಷಕ್ಕೊಮ್ಮೆ ದೇವಿ ಕುಂಡದಲ್ಲಿ ನಂದರಾಜ ಯಾತ್ರೆ ನಡೆಯುತ್ತದೆ. ಆ ಸಂದರ್ಭದಲ್ಲಿ ಗ್ರಾಮಸ್ಥರು ಅಲ್ಲಿನ ಪುಣ್ಯ ನದಿಗೆ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಸ್ವಯಂ ಘೋಷಿತ ದೇವಮಾನವ ಅದನ್ನು ಸ್ವಿಮ್ಮಿಂಗ್‌ ಪೂಲ್‌ ಮಾಡಿಕೊಂಡು ಅಪವಿತ್ರಗೊಳಿಸಿದ್ದಾನೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಳಿಕ ವಿಚಾರ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಬಳಿಕ ಈ ಕುರಿತು ತನಿಖೆ ಆರಂಭಿಸಿದೆ. ಅಕ್ರಮ ಕಟ್ಟಡವನ್ನು ತೆರವುಗೊಳಿಸಿ, ಬಾಬಾ ಚೈತನ್ಯ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next