Advertisement

ದನಗಳ ಅಕ್ರಮ ಸಾಗಾಟ : ಇಬ್ಬರ ಬಂಧನ

10:43 AM Jul 28, 2018 | |

ವಿಟ್ಲ: ದನಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ವಿಟ್ಲ ಪೋಲಿಸರ ತಂಡ ದಾಳಿ ನಡೆಸಿ, ಇಬ್ಬರು ಆರೋಪಿಗಳು, 4 ದನ, ಒಂದು ಕರು ಹಾಗೂ ಸಾಗಾಟಕ್ಕೆ ಬಳಸಿದ ಅಶೋಕ್‌ ಲೈಲಾಂಡ್‌ ದೋಸ್ತ್ ವಾಹನವನ್ನು ಗುರುವಾರ ತಡರಾತ್ರಿ ಕಡಂಬು ಜಂಕ್ಷನ್‌ನಲ್ಲಿ ವಶಕ್ಕೆ ಪಡೆಯಲಾಗಿದೆ.

Advertisement

ವಿಟ್ಲಪಟ್ನೂರು ಗ್ರಾಮದ ಪಡಾರು ಕೃಷ್ಣ ಭಟ್‌ ಅವರ ಪುತ್ರ ಶಶಿ ಕುಮಾರ್‌ ಪಡಾರು (48), ಕೊಳ್ನಾಡು ಗ್ರಾಮದ ಕಟ್ಟತ್ತಿಲ ಮಣ್ಣಗದ್ದೆ ನಿವಾಸಿ ಅಬ್ದುಲ್‌ ಹಾರಿಸ್‌ (21) ಬಂಧಿಸಲ್ಪಟ್ಟವರು. ಇವರಿಂದ ಒಟ್ಟು 5ಲ.ರೂ.ಗಳ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಟ್ಲ ಕಡೆಯಿಂದ ಸಾಲೆತ್ತೂರು ರಸ್ತೆ ಮೂಲಕ ಯಾವುದೇ ಅನುಮಾನ ಬಾರದ ರೀತಿಯಲ್ಲಿ ದನಗಳನ್ನು ಸಾಗಿಸಲಾಗುತ್ತಿತ್ತು. ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ನೀಡಿದ ಮಾಹಿತಿ ಪ್ರಕಾರ ಪೊಲೀಸರು ವಾಹನವನ್ನು ತಡೆದರು.

ವಿಚಾರಣೆ ವೇಳೆ ಶಶಿ ಕುಮಾರ್‌ ಬಜರಂಗದಳ ಕಾರ್ಯಕರ್ತ ಎಂದು ತಿಳಿದು ಬಂದಿದೆ  ಹಾಗೂ ಅಬ್ದುಲ್‌ ಹಾರಿಸ್‌ ಈ ಹಿಂದೆ ಅಳಿಕೆಯ ದನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ. ಕೊಣಾಜೆ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾನುವಾರುಗಳ ಸಾಗಾಟಕ್ಕೆ ವಾಹನವನ್ನು ಎತ್ತರಗೊಳಿಸಿ, ಮಾರ್ಪಾಡು ಮಾಡಲಾಗಿತ್ತು ಎನ್ನಲಾಗಿದೆ.

ವಿಟ್ಲ ಪೊಲೀಸ್‌ ಠಾಣಾಧಿಕಾರಿ ನಾಗರಾಜ್‌ ಎಚ್‌.ಇ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

“ನಮ್ಮ ಕಾರ್ಯಕರ್ತನಲ್ಲ’
ಕಡಂಬುವಿನಲ್ಲಿ  ಬಜರಂಗದಳ ಕಾರ್ಯಕರ್ತರ ಸಹಕಾರದಲ್ಲಿ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಶಶಿ ಕುಮಾರ್‌ ಪಡಾರು ಬಜರಂಗದಳ ಕಾರ್ಯಕರ್ತ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಅವನು ನಮ್ಮ ಕಾರ್ಯಕರ್ತನಲ್ಲ ಹಾಗೂ   ಸಂಘಟನೆಯ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಎಂದು  ಬಜರಂಗದಳದ ವಿಟ್ಲ ಪ್ರಖಂಡ ಸಂಚಾಲಕ  ಅಕ್ಷಯ್‌ ರಜಪೂತ್‌ ಕಲ್ಲಡ್ಕ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next