ಮುಂಡರಗಿ: ಅಧಿಕಾರಿಗಳ ಎಚ್ಚರಿಕೆ ಮಧ್ಯೆಯೂ ತುಂಗಭದ್ರಾ ನದಿ ಪಾತ್ರದಲ್ಲಿರುವ ತಾಲೂಕಿನ 6-7 ಗ್ರಾಮಗಳಲ್ಲಿ ಅಕ್ರಮ ಮರಳು ಅಡ್ಡೆಗಳು ತಲೆ ಎತ್ತಿವೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಂಗಳವಾರ ಜಂಟಿಯಾಗಿ ದಾಳಿ ನಡೆಸಿದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಮತ್ತು ಎಸ್ಪಿ ಯತೀಶ್ ಎನ್. ಅವರು, ಅಕ್ರಮವಾಗಿ ಸಂಗ್ರಹಿಸಿದ್ದ ನೂರಾರು ಟಿಪ್ಪರ್ ಮರಳು ದಾಸ್ತಾನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಶಿಂಗಟಾಲೂರು, ಗಂಗಾಪೂರ, ಶೀರನಳ್ಳಿ, ಕೋರ್ಲಹಳ್ಳಿ ಹಾಗೂ ನದಿ ಪಾತ್ರದ 6-7 ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ, ನದಿ ಪಾತ್ರದಲ್ಲಿರುವ ಮರಳು ಅಡ್ಡೆಗಳನ್ನು ಪರಿಶೀಲಿಸಿತು. ಈ ವೇಳೆ ಹಲವೆಡೆ ಅಕ್ರಮವಾಗಿ 50-60 ಲೋಡ್ ಮರಳು ಸಂಗ್ರಹಿಸಿರುವುದನ್ನು ಪತ್ತೆ ಮಾಡಿದ ಅಧಿ ಕಾರಿಗಳು ಅದನ್ನು ವಶಕ್ಕೆ ಪಡೆದರು.
ಈ ಪೈಕಿ ಶಿಂಗಟಾಲೂರು ಗ್ರಾಮದ ಅಕ್ರಮ ಮರಳು ಸಂಗ್ರಹಕಾರರ ಮೇಲೆ ದಾಳಿ ನಡೆಸಿ 174 ಲಾರಿಗಳಷ್ಟು ಮರಳು ವಶಕ್ಕೆ ಪಡೆದಿದ್ದಾರೆ. ಸುಮಾರು 6 ಜೆಸಿಬಿ ಹಾಗೂ 20 ಟಿಪ್ಪರ್‌ಗಳ ನೆರವಿನಿಂದ ಅದನ್ನು ಸರಕಾರಿ ಮರಳು ಪಾಯಿಂಟ್ ಗೆ ಸಾಗಿಸಲಾಗಿದೆ. ಅಲ್ಲದೇ, ಅಕ್ರಮವಾಗಿ ಮರಳು ಸಂಗ್ರಹಿಸಿದವರ ಬಗ್ಗೆ ಮಾಹಿತಿ ಕಲೆ ಹಾಕಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಕ್ರಮ ಮರಳು ಅಭಾದಿತ: ತಿಂಗಳ ಹಿಂದಷ್ಟೇ ಮುಂಡರಗಿ ತಾಲೂಕಿನ ವಿವಿಧ ಮರಳು ಸ್ಟಾಕ್ ಯಾರ್ಡ್‌ಗಳಿಗೆ ಭೇಟಿ ನೀಡಿದ್ದರು. ಉಪವಿಭಾಗಾ ಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್ ಆಶಪ್ಪ ಪೂಜಾರಿ ಹಾಗೂ ಪೊಲೀಸ್ ಅ ಧಿಕಾರಿಗಳನ್ನು ಒಳಗೊಂಡ ಅಧಿಕಾರಿಗಳ ತಂಡ ಸರಕಾರದ ಅನುಮತಿ ಪಡೆದಿರುವ ಮರಳು ಅಡ್ಡೆಗಳಿಗೆ ತೆರಳಿ ಪರಿಶೀಲನೆ ನಡೆಸಿತ್ತು. ಯಾವುದೇ ಕಾರಣಕ್ಕೂ ಅಕ್ರವಾಗಿ ಮರಳು ಸಂಗ್ರಹಿಸುವುದು, ಅಕ್ರವಾಗಿ ಸಾಗಿಸುವುದನ್ನು ಸಹಿಸುವುದಿಲ್ಲ. ಸರಕಾರ ಅನುಮತಿಸಿದ ಪ್ರದೇಶದಲ್ಲೇ ಮರಳು ತೆಗೆಯಬೇಕೆಂದು ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ, ಅಧಿಕಾರಿಗಳ ಸೂಚನೆಯನ್ನೂ ಲೆಕ್ಕಿಸದೇ ರಾಜಾರೋಷವಾಗಿ ನೂರಾರು ಲೋಡ್ ಮರಳು ಸಂಗ್ರಹಿಸಿದ್ದಾರೆ.
ತುಂಗಭದ್ರಾ ನದಿ ದಂಡೆಯ ಹೆಸರೂರು, ಕಕ್ಕೂರು, ಕೋರ್ಲಹಳ್ಳಿ, ಶೀರನಳ್ಳಿ, ಶಿಂಗಟಾಲೂರು, ಹಮ್ಮಿಗಿ, ಗುಮ್ಮಗೋಳ, ಬಿದರಹಳ್ಳಿ ಭಾಗದ 13 ಅಧಿಕೃತ ಮರಳು ಸಂಗ್ರಹಕಾರಕಗಳಿದ್ದು, ಅವುಗಳ ಸುತ್ತಲ-ಮುತ್ತಲ ಪ್ರದೇಶದಿಂದಲೇ ಅಕ್ರಮ ಮರಳು ಅಡ್ಡೆಗಳು ತಲೆ ಎತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಕ್ರಮ ಮರಳುಗಾರಿಕೆಗೆ ಪ್ರಭಾವಿಗಳ ಅಭಯ ಹಸ್ತವಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಅಧಿಕಾರಿಗಳ ದಿಟ್ಟ ಹೆಜ್ಜೆ: ಆದರೆ, ತಾಲೂಕಿನ ವಿವಿಧೆಡೆ ಅಕ್ರಮವಾಗಿ ಅಪಾರ ಪ್ರಮಾಣದ ಮರಳು ರಾಶಿ ಹಾಕಿರುವ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಜಿಲ್ಲಾ ಧಿಕಾರಿ ಹಾಗೂ ಎಸ್ಪಿ ತಮ್ಮ ಅಧಿ ಕಾರಿಗಳ ಪಡೆಯೊಂದಿಗೆ μàಲ್ಡ್‌ಗಿಳಿದಿದ್ದಾರೆ. ಅಕ್ರಮ ಮರಳು ಸಂಗ್ರಹದ ಸುಳಿವಿನ ಮೇರೆಗೆ ವಿವಿಧೆಡೆ ದಾಳಿ ನಡೆಸಿ, ಅಕ್ರಮ ಬಯಲು ಮಾಡಿದ್ದಾರೆ. ನೂರಾರು ಟಿಪ್ಪರ್ ಮರಳನ್ನು ಸರಕಾರಿ ಪಾಯಿಂಟ್‌ಗೆ ಸಾಗಿಸುವ ಮೂಲಕ ಮರಳು ದಂಧೆಕೋರರಿಗೆ ಬಿಸಿ ಮುಟ್ಟಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್ ಆಶಪ್ಪ ಪೂಜಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜೇಶ, ಸಿಪಿಐ ಸುನೀಲ್ ಸವದಿ ಸೇರಿದಂತೆ ಇತತರು ಹಾಜರಿದ್ದರು.