Advertisement

ಅಕ್ರಮ ಮರಳು ಸಾಗಾಟ : ಸ್ಥಳೀಯರನ್ನು ಕಂಡು ವಾಹನ ಬಿಟ್ಟು ಪರಾರಿಯಾದ ಆರೋಪಿಗಳು

06:42 PM Feb 25, 2022 | Team Udayavani |

ಕೊರಟಗೆರೆ: ಬುಲೇರೋ ವಾಹನಕ್ಕೆ ಅಕ್ರಮವಾಗಿ ಮರಳನ್ನು ತುಂಬಿಸುತ್ತಿದ್ದ ವೇಳೆ ಸ್ಥಳೀಯರನ್ನು ಕಂಡ ಕಳ್ಳರ ತಂಡ ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ತಾಲ್ಲೂಕಿನ ಕಸಬಾ ಹೋಬಳಿಯ ಹೂಲೀಕುಂಟೆ ಗ್ರಾಮದ ಸುವರ್ಣಮುಖಿ‌ ನದಿಯಲ್ಲಿ ಅಕ್ರಮವಾಗಿ ಮರಳನ್ನು ಕೆಎ46 -4022 ಬುಲೇರೋ ವಾಹನಕ್ಕೆ ತುಂಬುತ್ತಿದ್ದರು. ಇದನ್ನು ಗಮನಿಸಿದ ಸ್ಥಳೀಯರಾದ ಮಲ್ಲಣ್ಣ ಹಾಗೂ ಚಾಂದ್ ಪಾಷ ರವರನ್ನು ನೋಡಿದ ಕಳ್ಳರು ಬುಲೇರೋ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಪರಾರಿಯಾಗಿದ್ದಾರೆ.

ಈ ಭಾಗದಲ್ಲಿ ಅಕ್ರಮ ಮರಳು ಸಾಗಾಣಿಕೆಯಿಂದ ಅಂತರ್ ಜಲ ಕುಸಿದು ವ್ಯವಸಾಯಕ್ಕೆ ಅನಾನುಕೂಲವಾಗುವ ಸಾಧ್ಯತೆಗಳಿರುತ್ತವೆ ಎಂದು‌ ಸ್ಥಳೀಯರು ಆರೋಪಿಸಿದ್ದಾರೆ.

ಆರೋಪಿಗಳು ಹೊಳವನಹಳ್ಳಿ ಹೋಬಳಿಯ ಬೊಮ್ಮಲದೇವಿಪುರ ಗ್ರಾಮದವರಾದ ನಾಗ ಮತ್ತು ಇತರೆ ನಾಲ್ಕು ಜನರ ಆರೋಪಿಗಳ ಮೇಲೆ ಕಲಂ 379 ಐಪಿಸಿ ಮತ್ತು 21(4) ಎಂಎಂಡಿಆರ್ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಬುಲೇರೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯ ಪಿಎಸ್ಐ ಮಂಜುಳ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ದ್ವಿತೀಯ ಟೆಸ್ಟ್‌: ಸರೆಲ್‌ ಇರ್ವೀ ಚೊಚ್ಚಲ ಶತಕ; ದಕ್ಷಿಣ ಆಫ್ರಿಕಾ ಚೇತರಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next