Advertisement
ಚಿತ್ತಾಪುರದ ದಂಡೋತಿ ಬಳಿಯ ಕಾಗಿಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ತಮ್ಮ ಅಧಿಕಾರಿಗಳ ಜೊತೆ ಕಾರಿನಲ್ಲಿ ತೆರಳಿದ್ದ ಸಂದರ್ಭ ಅವರ ಕಾರಿನ ಮೇಲೆ ಟಿಪ್ಪರ್ ಹರಿಸಲು ಯತ್ನಿಸಿದ ಘಟನೆ ನಡೆದಿರುವುದಾಗಿ ಸ್ವತಃ ಜಿಲ್ಲಾಧಿಕಾರಿಯೇ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ವಿವರಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಘೋಷ್ ಮೇಲೆ ಟಿಪ್ಪರ್ ಹಾಯಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಮಾಡಬೂಳ ಪೊಲೀಸರು ಮಾಧ್ಯಮಕ್ಕೆ ತಿಳಿಸಿದ್ದಾರೆ.