Advertisement

ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: ದೋಣಿ, ಮರಳು ವಶಕ್ಕೆ

09:35 PM Feb 17, 2023 | Team Udayavani |

ಮಂಗಳೂರು: ನೇತ್ರಾವತಿ ನದಿಯ ಉಳಿಯಾ ದ್ವೀಪದಿಂದ ಸುಮಾರು 1 ಕಿ.ಮೀ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸುತ್ತಿದ್ದ ದೋಣಿ ಮತ್ತಿತರ ಪರಿಕರಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Advertisement

ಅಬ್ದುಲ್‌ ಖಾದರ್‌ ಮತ್ತು ಮಹಮ್ಮದ್‌ ಇಸ್ಮಾಯಿಲ್‌ ಅಜರುದ್ದೀನ್‌ ಎಂಬವರ ಸೂಚನೆಯಂತೆ ಕಾರ್ಮಿಕರು ಅಕ್ರಮವಾಗಿ ಮರಳು ತೆಗೆಯುತ್ತಿದ್ದರು.

4 ಟನ್‌ ಮರಳನ್ನು ದೋಣಿಗಳಲ್ಲಿ ತುಂಬಿಸಿ ಸಾಗಾಟ ಮಾಡುತ್ತಿದ್ದರು. ಎರಡು ದೋಣಿ, ಮೋಟಾರು, ಎಲ್‌ಪಿಜಿ ಸಿಲಿಂಡರ್‌, ಮರಳು ಸೇರಿದಂತೆ 4 ಲ.ರೂ.ಗಳಿಗೂ ಅಧಿಕ ಮೌಲ್ಯದ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಂಗಳೂರು: ಜೈಲಿಗೆ ಮಾದಕ ವಸ್ತು ಸಾಗಾಟ ಯತ್ನ: ಸಿಸಿಬಿ ಪೊಲೀಸರಿಂದ ಇಬ್ಬರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next