ಬೀಳಗಿ: ಕೃಷ್ಣೆಯ ಒಡಲಲ್ಲಿ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಲಾಗುತ್ತಿದ್ದು, ಗಣಿ ಮತ್ತು ಭೂ ವಿಜ್ಞಾನ ಸಚಿವರ ತವರಲ್ಲಿಯೇ ಅವರಕಣ್ತಪ್ಪಿಸಿ ಇಂತಹ ವ್ಯವಹಾರ ನಡೆಯುತ್ತಿದೆ. ಹೌದು. ತಾಲೂಕಿನ ಸಿದ್ದಾಪುರ, ಕೊಂತಿಕಲ್‌ಗ್ರಾಮದ ಸಮೀಪ ಕೃಷ್ಣಾ ನದಿಯಲ್ಲಿ ನಿತ್ಯವೂಮರಳು ಎತ್ತುವ ಅಕ್ರಮ ಕಾರ್ಯ ನಡೆಯುತ್ತಲೇ ಇದೆ.
ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ ನಿರಾಣಿ ಅವರು ಜನರಿಗೆ ಸಮಸ್ಯೆಯಾಗದಿರಲಿ, ಅವರಿಗೆ ಕಡಿಮೆ ದರದಲ್ಲಿ ಮರಳು ದೊರೆಯಲೆಂಬ ಕಾಳಜಿಯೊಂದಿಗೆ ಮರಳು ನೀತಿಗೆ ತಿದ್ದುಪಡಿ ತರಲು ಮುಂದಾಗಿದ್ದಾರೆ. ಟ್ರ್ಯಾಕ್ಟರ್, ಎತ್ತಿನ ಬಂಡಿ, ಬೈಕ್ ಮೇಲೆ ಮರಳು ಸಾಗಿಸಿದರೆ ಹೆಚ್ಚಿನ ದಂಡ ವಿಧಿಸುವಂತಿಲ್ಲ. ಅಲ್ಲದೇ ಆಶ್ರಯ ಮನೆ ಕಟ್ಟುವವರಿಗೆ,ಬಡ ಜನರಿಗೆ ಕೈಗೆಟಕುವ ದರದಲ್ಲಿ ಮರಳು ದೊರೆಯಬೇಕೆಂಬುದು ಸಚಿವರ ಆಶಯ.ಆದರೆ, ಸಚಿವರ ಆಶಯಕ್ಕೆ ವಿರುದ್ಧವಾಗಿಸಿದ್ದಾಪುರ, ಕೊಂತಿಕಲ್ ಬಳಿ ಕೃಷ್ಣೆಯ ಒಡಲುಬಗೆದು ಮರಳು ತೆಗೆಯಲಾಗುತ್ತಿದೆ ಎಂಬ ಆರೋಪ ಪ್ರಬಲವಾಗಿ ಕೇಳಿ ಬಂದಿದೆ.
ನಮ್ಮ ಭಾಗದಲ್ಲಿ ಸರಿಯಾದ ಮಳೆ ಇಲ್ಲದೆ ನೀರಿನ ಸಮಸ್ಯೆ ಎದುರಾಗಿದೆ. ಭೂಗರ್ಭಕ್ಕೆಕೈ ಹಾಕಿ ಮರಳನ್ನು ತೆಗೆಯುದರಿಂದಅಂತರ್ಜಲ ಕುಸಿತವಾಗುತ್ತದೆ. ಇದರಿಂದ ನೀರಿನ ಉಂಟಾಗುತ್ತದೆ. ನದಿಯಲ್ಲಿ ನೀರಿನಮಟ್ಟವೂ ಇಳಿಕೆಯಾಗುತ್ತದೆ. ಕಾರಣ ಸರಕಾರಸಂಪೂರ್ಣ ಅಕ್ರಮ ಮರಳು ದಂಧೆಗೆ ಕಡಿವಾಣಹಾಕಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.ಆದರೆ, ಜನರಿಗೆ ತೊಂದರೆ ಆಗದ ಹಾಗೆಸರಕಾರ ಸೂಕ್ತ ಕಾನೂನು ಚೌಕಟ್ಟಿನಲ್ಲಿ ಮರಳಿಗೆಪರವಾನಗಿ ನೀಡಿತ್ತು. ಅಂತಹವರಿಗೆ ಮಾತ್ರ ಮರಳು ಸಾಗಣಿಕೆಗೆ ಅವಕಾಶ ನೀಡಿತ್ತು.
ಲೋಕೋಪಯೋಗಿ ಇಲಾಖೆ ದಾಖಲೆ ಪ್ರಕಾರ, ಸಿದ್ದಾಪುರ, ಕೊಂತಿಕಲ್ ಬಳಿ ಮರಳುಪಾಯಿಂಟ್‌ಗಳಿಲ್ಲ. ಅದರಲ್ಲೂ ನದಿಯಿಂದ ಮರಳು ಕೆಲವೊಂದು ನಿಯಮಗಳಿವೆ. ಆಯಾವ ನಿಯಮಗಳೂ ಇಲ್ಲಿ ಪಾಲನೆಯಾಗುತ್ತಿಲ್ಲ ಎಂಬ ಆರೋಪವಿದೆ.
ನಮ್ಮ ತಾಲೂಕಿನಲ್ಲಿ ಅಕ್ರಮಮರಳು ವ್ಯವಹಾರ ಕಡಿವಾಣಹಾಕುತ್ತೇವೆ. ಈಗಾಗಲೇ ಎಲ್ಲಾ ಮರಳಿನಪಾಯಿಂಟ್‌ಗಳನ್ನು ಬಂದ್ ಮಾಡಲುಸೂಚಿಸಲಾಗಿದೆ. ಕೆಲವೆಡೆ ಅಕ್ರಮ ಮರಳು ವ್ಯವಹಾರ ನಡೆಸಿದವರ ಮೇಲೆಪ್ರಕರಣ ಕೂಡ ದಾಖಲಿಸಲು ಕ್ರಮಕೈಗೊಳ್ಳಲಾಗುವುದು.
– ಆನಂದ ಕೋಲಾರ, ತಹಶೀಲ್ದಾರ ಬೀಳಗಿ
-ಚೇತನ ಆರ್.ಕಣವಿ