Advertisement

ಅಕ್ರಮ ಗಣಿಗಾರಿಕೆ: ಅಖೀಲೇಶ್‌ಗೆ ಸಂಕಷ್ಟ

12:30 AM Jan 06, 2019 | Team Udayavani |

ಹೊಸದಿಲ್ಲಿ: ಅಕ್ರಮ ಮರಳು ಗಣಿಗಾರಿಕೆ ಆರೋಪದಲ್ಲಿ ಉತ್ತರಪ್ರದೇಶದ 14 ಕಡೆ ಸಿಬಿಐ ಶನಿವಾರ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಮಾಜಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಹಾಗೂ ಸಮಾಜವಾದಿ ಪಕ್ಷದ ಮತ್ತೂಬ್ಬ ಹಿರಿಯ ನಾಯಕ ಗಾಯತ್ರಿ ಪ್ರಜಾಪತಿಗೆ ಸಮನ್ಸ್‌ ಜಾರಿ ಮಾಡುವ ಸಾಧ್ಯತೆಯಿದೆ.

Advertisement

2012-16ರ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳು ಅಕ್ರಮ ಮರಳು ಗಣಿಗಾರಿಕೆಗೆ ಅವಕಾಶ ನೀಡಿದ್ದರು ಹಾಗೂ ಗಣಿಗಾರಿಕೆ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ನಿಷೇಧ ಹೇರಿದ್ದರೂ ಲೈಸೆನ್ಸ್‌ಗಳನ್ನು ನವೀಕರಣ ಮಾಡಿಕೊಟ್ಟಿ ದ್ದರು. ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದ್ದಲ್ಲದೆ, ಭೋಗ್ಯದಾರರಿಂದ ಹಣವನ್ನೂ ವಸೂಲಿ ಮಾಡಲಾಗುತ್ತಿತ್ತು ಎಂದು ಸಿಬಿಐ ಆರೋಪಿಸಿದೆ. 

ಈ ಅವಧಿಯಲ್ಲಿ ಉತ್ತರ ಪ್ರದೇಶ ಮುಖ್ಯ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ  ಹಾಗೂ ಗಣಿ ಖಾತೆ ನಿರ್ವಹಿಸಿದ್ದ ಅಖೀಲೇಶ್‌ಗೂ ಸಮನ್ಸ್‌ ಕಳುಹಿಸುವ ಸಾಧ್ಯತೆಯಿದೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದ 2008ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಬಿ. ಚಂದ್ರಕಲಾ ಅವರ ನಿವಾಸ, ಕಚೇರಿಯ ಮೇಲೂ ಶನಿವಾರ ದಾಳಿ ನಡೆದಿ ರುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next