Advertisement

ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ಅಕ್ರಮ

07:00 AM Jun 02, 2020 | Lakshmi GovindaRaj |

ಚಿಕ್ಕಬಳ್ಳಾಪುರ: ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವ ವಿಷಯದಲ್ಲಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಚ್‌. ವಂಶಿಕೃಷ್ಣ ಎಂಬಾತ ಜಿಲ್ಲಾ ಶಸ್ತ್ರ ಚಿಕಿತ್ಸಕರ ಸಹಿ ನಕಲು  ಮಾಡಿ ಲಕ್ಷಾಂತರ ರೂ. ಅಕ್ರಮ ಬಿಲ್‌ ಪಾವತಿಗೆ ಅನುಮೋದನೆ ನೀಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಜಿಲ್ಲೆಯ ಗೌರಿಬಿದನೂರಿನ 107 ಮಂದಿ ಶಿಕ್ಷಕರಿಗೆ ವಿಚಾರಣೆಗೆ ಹಾಜರಾಗುವಂತೆ ಚಿಕ್ಕಬಳ್ಳಾಪುರ ನಗರ ಠಾಣೆ  ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಏನಿದು ಪ್ರಕರಣ?: ಸರ್ಕಾರಿ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ತಮಗೆ ತಗಲುವ ವೈ ವೆಚ್ಚವನ್ನು ಮರು ಪಾವತಿ ಮಾಡಿಕೊಳ್ಳಲು ಅವಕಾಶ ಇದ್ದು ಇದಕ್ಕೆ ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರ ದೃಢೀಕರಣ ಅಗತ್ಯ. ಆದರೆ ಜಿಲ್ಲೆಯ  ಗೌರಿಬಿದನೂರು ತಾಲೂಕಿನ 107 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರ ವೈದ್ಯಕೀಯ ವೆಚ್ಚ ಮರು ಪಾವತಿಸುವ ವಿಚಾರದಲ್ಲಿ ಜಿಲ್ಲಾಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ವಂಶಿಕೃಷ್ಣ ಎಂಬಾತ ಶಸ್ತ್ರಚಿಕಿತ್ಸಕರ ಸಹಿ ನಕಲು ಮಾಡಿ  ಅಕ್ರಮವೆಸಗಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಚಿಕ್ಕಬಳ್ಳಾಪುರ ನಗರ ಠಾಣೆ ಆರಕ್ಷಕ ಉಪ ನಿರೀಕ್ಷಕರಿಗೆ ಕೋರಿದ್ದರು.

ಶಿಕ್ಷಕರಿಗೆ ನೋಟಿಸ್‌: ಈಗ 2015 ಜೂನ್‌ 4ರಿಂದ 2018ರ ಜನವರಿ 1 ರವರೆಗೂ ವೈದ್ಯಕೀಯ ವೆಚ್ಚ ಮರು ಪಾವತಿ ಮಾಡಿಕೊಳ್ಳಲು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರ ಸಹಿಯನ್ನು ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ನಕಲು ಮಾಡಿ 107  ಮಂದಿಗೆ ದೃಢೀಕರಣ ನೀಡಿರುವ ಹಿನ್ನೆಲೆಯಲ್ಲಿ 107 ಮಂದಿ ಶಿಕ್ಷಕರನ್ನು ವಿಚಾರಣೆಗೆ ಕರೆದಿದ್ದು, ಸೋಮವಾರ 15 ಮಂದಿ ಶಿಕ್ಷಕರು ವಿಚಾರಣೆಗೆ ಹಾಜರಾಗಿದ್ದರು. ಒಟ್ಟು 7 ದಿನಗಳನ್ನು ನಿಗದಿಪಡಿಸಿ ಶಿಕ್ಷಕರ ನ್ನು ಚಿಕ್ಕಬಳ್ಳಾಪುರ ನಗರ  ಠಾಣೆ ಪೊಲೀಸರು ವಿಚಾರಣೆಗೆ ಕರೆದಿದ್ದು, ಪ್ರಕರಣ ಸಾಕಷ್ಟು ಕುತೂಹಲ ಕೆರಳಿಸಿದೆ.

ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದ ವಂಶಿಕೃಷ್ಣ ಈ ಹಿಂದೆ ಶಸ್ತ್ರಚಿಕಿತ್ಸಕರ ಸಹಿ ನಕಲು ಮಾಡಿ ಕೆಲ ಶಿಕ್ಷಕರಿಗೆ ವೈದ್ಯಕೀಯ ವೆಚ್ಚ ಮರು ಪಾವತಿಗೆ ದೃಢೀಕರಣ ಮಾಡಿದ್ದು, ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ತಪ್ಪಿತಸ್ಥರ  ಮೇಲೆ ಕ್ರಮ ವಹಿಸುವಂತೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
-ಡಾ.ರಮೇಶ್‌, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯರು

* ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next