Advertisement

ಕೆಎಸ್‌ಆರ್‌ಪಿ ಹುದ್ದೆಯಲ್ಲಿ ಅಕ್ರಮ

11:44 AM Mar 23, 2021 | Team Udayavani |

ಬೆಂಗಳೂರು: ಕೆಎಸ್‌ ಆರ್‌ಪಿ ಕಾನ್‌ ಸ್ಟೇಬಲ್‌ಗ‌ಳ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಮೂಲ ಅಭ್ಯರ್ಥಿಗಳ ಬದಲಾಗಿ ನಕಲಿ ಅಭ್ಯ ರ್ಥಿಗಳು ಹಾಜರಾಗಿರುವ ಆಘಾತಕಾರಿ ಘಟ ನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿರು ವ ಆಗ್ನೇಯ ವಿಭಾಗ ಪೊಲೀಸರು ಮೂವರು ಅಭ್ಯ ರ್ಥಿಗಳು ಆರು ಮಂದಿಯನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬೆಳ ಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಜಗದೀಶ್‌ ದೊಡ್ಡ ಗೌಡರ್‌ (24), ರಾಮ ಚಂದ್ರ ಚಿಗಡ್ಡನವ ರ್‌(26) ಮತ್ತು ಲಕ್ಷ್ಮಣ್‌ (24) ಮತ್ತು ರಾಯಭಾಗದ ಮಲ್ಲಯ್ಯ ಪೂಜಾರಿ (25) ಹಾಗೂ ನಾಗಪ್ಪ ಪಕೀರಪ್ಪಗೊಲ್ಲ(26), ಮಲ್ಲಿಕಾರ್ಜುನ್‌ ಡೋನಿ (26) ಬಂಧಿತರು. ತಲೆ ಮರೆಸಿಕೊಂಡಿರುವ ಪ್ರಕಾಶ್‌ ಆಡಿನ್‌, ಸೈಯದ್‌ ಚಿಮ್ಮಡ್‌ ಎಂಬುವವರಿಗೆ ಹುಡುಕಾಟ ನಡೆಯುತ್ತಿದೆ.

ಆರೋಪಿಗಳ ವಿರುದ್ಧ ಪರಪ್ಪನ ಅಗ್ರ ಹಾರ ಠಾಣೆ ಮತ್ತು ಮಡಿ ವಾಳ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದರು. ಆರೋಪಿಗಳ ಪೈಕಿ ಜಗದೀಶ್‌ ದೊಡ್ಡ ಗೌಡರ್‌, ಮಲ್ಲಯ್ಯ ಪೂಜಾರಿ ಮತ್ತು ನಾಗಪ್ಪ ಪಕೀರಪ್ಪ ಅಭ್ಯ ರ್ಥಿಗಳಾಗಿದ್ದು, ಈ ಹಿಂದೆ ನಡೆದ ದೈಹಿಕ ಪರೀಕ್ಷೆಗೆ ನಕಲಿ ಅಭ್ಯ ರ್ಥಿಗಳನ್ನು ಕಳುಹಿಸಿ ಉತ್ತೀ ರ್ಣರಾಗಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕರ್ನಾ ಟಕ ರಾಜ್ಯ ಮೀಸಲು ಪೊಲೀಸ್‌ ಪಡೆಯಲ್ಲಿ ಖಾಲಿ ಇರುವ 230(ಸ್ಥ ಳೀ ಯೇ ತ ರ) ವಿಶೇಷ ಮೀಸಲು ಪೊಲೀಸ್‌ ಕಾನ್‌ ಸ್ಟೇಬಲ್‌ ಹುದ್ದೆ ಗಳನ್ನು ಭರ್ತಿ ಮಾಡಲು 2019-20ನೇ ಸಾಲಿನಲ್ಲಿ ಅಧಿ ಸೂಚನೆ ಹೊರಡಿಸಲಾಗಿತ್ತು. ಈ ಸಂಬಂಧ ಜನವರಿಯಲ್ಲಿ ಕೆಎಸ್‌ ಆರ್‌ಪಿಯ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆ ಸಲಾಗಿತ್ತು. ಈ ವೇಳೆ ಜಗದೀಶ್‌ ದೊಡ್ಡ ಗೌಡರ್‌ ತನ್ನ ಬದಲಿಗೆ ಪ್ರಕಾಶ್‌ ಆಡಿನ್‌, ಮಲ್ಲಯ್ಯ ಪೂಜಾರಿ ಬದಲಿಗೆ ಅಪರಿಚಿತ ವ್ಯಕ್ತಿ ಮತ್ತು ನಾಗಪ್ಪ ಪಕೀರಪ್ಪ ಬದಲಿಗೆ ಮಲ್ಲಿಕಾರ್ಜುನ್‌ ಡೋನಿ ಎಂಬವರು ದೈಹಿಕ ಪರೀಕ್ಷೆಗೆ ಹಾಜರಾಗಿದ್ದು, ಮೂವರು ಉತ್ತಮ ಅಂಕಗಳನ್ನು ಪಡೆದು ಉತ್ತೀ ರ್ಣ ರಾಗಿದ್ದರು. ಅದನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು.

ವೈದ್ಯಕೀಯ ಪರೀಕ್ಷೆಯಲ್ಲಿ ವಂಚನೆ ಬಯಲು: ಉತ್ತೀ ರ್ಣಗೊಂಡ ಮೂವರು ಅಭ್ಯರ್ಥಿಗಳಿಗೆ ಮಾ.8 ರಿಂದ 23ರವ ರೆಗೆ ನಗ ರದ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪ ತ್ರೆ ಯಲ್ಲಿ ವೈದ್ಯ ಕೀಯ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಈ ಹಿಂದೆ ದೈಹಿಕ ಪರೀಕ್ಷೆ ಚಿತ್ರೀಕರಿಸಿ ಕೊಂಡಿದ್ದ ವಿಡಿ ಯೊವನ್ನು ಮುಂದಿಟ್ಟು ಕೊಂಡು ಅಭ್ಯ ರ್ಥಿಗಳನ್ನು ವೈದ್ಯಕೀಯ ಪರೀ ಕ್ಷೆಗೆ ಕಳುಹಿಸಲಾಗಿತ್ತು. ಈ ಮಧ್ಯೆ ಜಗ ದೀಶ್‌ ದೊಡ್ಡ ಗೌಡರ್‌ ಮತ್ತು ಮಲ್ಲಯ್ಯ ಪೂಜಾರಿ ದಾಖಲಾತಿ ಪರಿಶೀಲನೆ ವೇಳೆ ಈ ಹಿಂದೆ ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯ ರ್ಥಿಗಳ ಮುಖ ಚಹರೆಗೂ ಜನವರಿಯಲ್ಲಿ ನಡೆದ ದೈಹಿಕ ಪರೀ ಕ್ಷೆಯಲ್ಲಿ ಭಾಗಿಯಾಗಿದ್ದ ಅಭ್ಯ ರ್ಥಿಗಳ ಮುಖಚಹ ರೆಗೂ ವ್ಯತ್ಯಾಸ ಕಂಡು ಬಂದಿದೆ.

Advertisement

ಕೂಡಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದ್ದು, ಇಬ್ಬರು ಅರ್ಜಿ ಸಲ್ಲಿಸಿದ ಅಭ್ಯ ರ್ಥಿಗಳು ತಾವೇ ಎಂದು ಸುಳ್ಳು ಹೇಳಿದ್ದಾರೆ. ಬಳಿಕ ತೀವ್ರ ರೀತಿ ಯಲ್ಲಿ ವಿಚಾರಣೆ ನಡೆಸಿದಾಗ ಜಗ ದೀಶ್‌ ದೊಡ್ಡ ಗೌಡರ್‌, ಗೋಕಾಕ್‌ ಜಿಲ್ಲೆಯ ಪ್ರಕಾಶ್‌ ಆಡಿನ್‌ ಎಂಬಾತ ದೈಹಿಕ ಪರೀ ಕ್ಷೆಯಲ್ಲಿ ಭಾಗಿಯಾಗಿದ್ದಾನೆ. ಮಧ್ಯ ವರ್ತಿಯಾಗಿ ರಾಮಚಂದ್ರ ಚಿಗಡ್ಡನವರ್‌ ಮತ್ತು ಲಕ್ಷ್ಮಣ್‌ ಕೆಲಸ ಮಾಡಿದ್ದಾರೆ ಎಂದು ಹೇಳಿಕೆ ನೀಡಿದ್ದ.

ಇನ್ನು ಮಲ್ಲಯ್ಯ ಪೂಜಾರಿ ವಿಚಾರಣೆ ವೇಳೆ ದೈಹಿಕ ಪರೀಕ್ಷೆಗೆ ಸಾಮ ರ್ಥ್ಯವಿಲ್ಲದರಿಂದ ಮಧ್ಯ ವರ್ತಿ ಜಮಖಂಡಿಯ ಸೈಯದ್‌ ಚಿಮ್ಮಡ್‌ಗೆ 2.5 ಲಕ್ಷ ರೂ. ಕೊಟ್ಟು ನಕಲಿ ಅಭ್ಯ ರ್ಥಿ ಕಳುಹಿಸಲು ಕೇಳಿ ಕೊಂಡಿದ್ದೆ. ಆತ ಯಾರನ್ನು ಕಳುಹಿಸಿದ್ದ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಸೈಯದ್‌ ಚಿಮ್ಮ ಡ್‌ ಮತ್ತು ದೈಹಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಅಪರಿಚಿತ ಅಭ್ಯ ರ್ಥಿಗಾಗಿ ಶೋಧ ಮುಂದುವರಿದಿದೆ. ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಆಗ್ನೇಯ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಸೋದರ ಸಂಬಂಧಿ ಕಳುಹಿಸಿ ಸಿಕ್ಕಿ ಬಿದ್ದ :  ಮತ್ತೂಂದು ಪ್ರಕರಣದಲ್ಲಿ ನಾಗಪ್ಪ ಎಸ್‌ ಪಕೀ ರಪ್ಪಗೊಲ್ಲ ಮತ್ತು ಮಲ್ಲಿಕಾ ರ್ಜನ್‌ ಡೋನಿ ಎಂಬ ವ ರನ್ನು ಮಡಿ ವಾಳ ಪೊಲೀಸರು ಬಂಧಿಸಿದ್ದಾರೆ. ಮಾ.8ರಂದು ನಡೆದ ದಾಖಲಾತಿ ಪರಿಶೀಲನೆ ವೇಳೆ ಈ ಹಿಂದಿನ ದೈಹಿಕ ಪರೀಕ್ಷೆಯ ವಿಡಿಯೊ ಗಮನಿಸಿದ ಅಭ್ಯ ರ್ಥಿಗಳ ಮುಖ ಚಹರೆಯಲ್ಲಿ ವ್ಯತ್ಯಾಸವಾಗಿತ್ತು. ಬಳಿಕ ತೀವ್ರ ರೀತಿಯಲ್ಲಿ ನಾಗಪ್ಪ ಪಕೀರಪ್ಪನನ್ನು ವಿಚಾ ರಣೆ ನಡೆ ಸಿ ದಾ ಗ ಸತ್ಯಾಂಶ ಬೆಳಕಿಗೆ ಬಂದಿದೆ. ಮಲ್ಲಿಕಾರ್ಜುನ ಡೋನಿ, ನಾಗಪ್ಪನ ಪಕೀರ ಪ್ಪನ ಸೋದರ ಸಂಬಂಧಿಯಾಗಿದ್ದು, ಅಲ್ಲದೆ, ಈ ಹಿಂದೆ ನಾಲ್ಕೈದು ಬಾರಿ ದೈಹಿಕ ಪರೀಕ್ಷೆಯಲ್ಲಿ ಫೇಲ್‌ ಆದ್ದರಿಂದ ಸಂಬಂಧಿ ಮಲ್ಲಿಕಾರ್ಜನ್‌ ಡೋನಿಯನ್ನು ಕಳುಹಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ಮಡಿ ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next