Advertisement

ಅಕ್ರಮ ಬಾಂಗ್ಲಾದೇಶಿಯರನ್ನು ಕರ್ನಾಟಕದಿಂದ ಹೊರ ದಬ್ಬಿ: ಸೂರ್ಯ

10:53 AM Jul 11, 2019 | Vishnu Das |

ಹೊಸದಿಲ್ಲಿ: ಆಕ್ರಮ ಬಾಂಗ್ಲಾದೇಶಿ ವಲಸಿಗರು ಕರ್ನಾಟಕದ ಭದ್ರತೆಗೆ ಸವಾಲಾಗಿದ್ದು,ಕೇಂದ್ರ ಸರ್ಕಾರ ಎನ್‌ಆರ್‌ಸಿಯನ್ನು ಕರ್ನಾಟಕಕ್ಕೂ ವಿಸ್ತರಿಸಬೇಕು ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂಸತ್‌ನಲ್ಲಿ ಮನವಿ ಮಾಡಿದ್ದಾರೆ.

Advertisement

ಬುಧವಾರ ಸಂಸತ್‌ ಕಲಾಪವನ್ನುದ್ದೇಶಿಸಿ ಮಾತನಾಡಿದ ಅವರು , ಜಮಾತ್‌ ಉಲ್‌ ಮುಜಾಹಿದೀನ್‌ ಬಾಂಗ್ಲಾದೇಶ್‌ ಉಗ್ರರು ಬೆಂಗಳೂರಿನಲ್ಲೇ ಅತ್ಯಂತ ಅಪಾಯಕಾರಿ ರಾಕೆಟ್‌ ಬಾಂಬ್‌ ಮತ್ತಿತರ ಸ್ಫೋಟಕಗಳನ್ನು ತಯಾರಿಸಿ ದೇಶದ ವಿರುದ್ಧ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿರುವ ವಿಚಾರವನ್ನು ಪ್ರಸ್ತಾವಿಸಿದರು.

ಎನ್‌ಆರ್‌ಸಿಯನ್ನು ಬೆಂಗಳೂರು ಮತ್ತು ಕರ್ನಾಟಕಕ್ಕೂ ವಿಸ್ತರಿಸಿ ಆಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಹೊರ ಹಾಕುವ ಕೆಲಸ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬೆಂಗಳೂರು ಹೊರವಲಯದ ಚಿಕ್ಕಬಾಣಾವರದಲ್ಲಿ ಜೆಎಂಬಿ ಉಗ್ರರು ವಾಸವಿದ್ದ ಹಬೀಬುರ್‌ ಮನೆಯಲ್ಲಿ ಸ್ಫೋಟಕಸಾಮಗ್ರಿಗಳನ್ನು ಎನ್‌ಐಎ ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು. 9 ಎಂ.ಎಂ ಸ್ಫೋಟಕ, ಸುಧಾರಿತ ಗ್ರೆನೇಡ್‌ ಶೆಲ್‌ ದೊರೆತಿತ್ತು. ಆಚ್ಚರಿಯೆಂಬಂತೆ, ಐಇಡಿ/ರಾಕೆಟ್‌ ತಯಾರಿಸುವ ಇತರ ಸ್ಫೋಟಕ ಸಾಮಗ್ರಿಗಳೂ ದೊರೆತಿದ್ದವು .

Advertisement

Udayavani is now on Telegram. Click here to join our channel and stay updated with the latest news.

Next