Advertisement

ಉಡುಪಿ: ನಕಲಿ ವೈದ್ಯ ನಡೆಸುತ್ತಿದ್ದ, ಡೆಂಟಲ್ ಕ್ಲಿನಿಕ್ ಗೆ ಬೀಗ ಜಡಿದ ಅಧಿಕಾರಿಗಳು

04:00 PM Nov 04, 2020 | sudhir |

ಉಡುಪಿ: ನಗರದಲ್ಲಿ ನಕಲಿ ದಂತ ವೈದ್ಯ ನಡೆಸುತ್ತಿದ್ದ ಡೆಂಟಲ್‌ ಕ್ಲಿನಿಕ್‌ ಲ್ಯಾಬ್‌ನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ, ಸೀಲ್‌ ಮಾಡಿದ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದೆ.

Advertisement

ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಶ್ವೇತಾ ಎನ್ನುವವರಿಗೆ ಶಾಶ್ವತ್‌ ಡೆಂಟಲ್‌ ಕ್ಲಿನಿಕ್‌ ಲ್ಯಾಬ್‌ ಹೆಸರಿನ ವೈದ್ಯಕೀಯ ಸಂಸ್ಥೆಯನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ 2007 ರ ಅಡಿಯಲ್ಲಿ ಅನುಮತಿಯನ್ನು ನೀಡಲಾಗಿತ್ತು. ಈ ಅನುಮತಿಯನ್ನು ಶ್ವೇತಾ ವೈದ್ಯಕೀಯ ಪದವಿ ಹೊಂದಿರದ ಗೋವಿಂದ ಭಂಡಾರಿ ಅವರಿಗೆ ಕ್ಲಿನಿಕ್‌ ನಡೆಸಲು ಅವಕಾಶ ನೀಡಿದ್ದಾರೆ. ಮಾಹಿತಿ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ಲಿನಿಕ್‌ ಮೇಲೆ ದಾಳಿ ನಡೆಸಿದ್ದಾರೆ.

ಆರೋಪಿಗಳು ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕರಿಗೆ ನಂಬಿಕೆ ದ್ರೋಹವೆಸಗಿ, ವಂಚನೆ ಮಾಡಿರುವುದಾಗಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನ ಅವರು ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ;ಫಲಿತಾಂಶ ಇನ್ನಷ್ಟು ವಿಳಂಬ:ಸೋಲು, ಗೆಲುವು: ಸುಪ್ರೀಂಕೋರ್ಟ್ ಮೆಟ್ಟಿಲೇರುತ್ತೇನೆ ಎಂದ ಟ್ರಂಪ್!

Advertisement

Udayavani is now on Telegram. Click here to join our channel and stay updated with the latest news.

Next