Advertisement

ಕೋರಮಂಗಲದಲ್ಲಿ ಅಕ್ರಮ ಡ್ಯಾನ್ಸ್‌ ಬಾರ್‌: ಮೂವರ ಬಂಧನ ;28 ಮಹಿಳೆಯರ ರಕ್ಷಣೆ

02:52 PM Feb 20, 2022 | Team Udayavani |

ಬೆಂಗಳೂರು: ಕೋರಮಂಗಲದಲ್ಲಿ ಪರವಾನಗಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಡೆಸುತ್ತಿದ್ದ ಡ್ಯಾನ್ಸ್‌ಬಾರ್‌ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ, 28 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

Advertisement

ಕೋರಮಂಗಲ 6ನೇ ಬ್ಲಾಕ್‌ನಲ್ಲಿರುವ ಸಿಕ್ಸಿ r ದೇಸಿ ಪಬ್‌ ಬಾರ್‌ ಮತ್ತು ರೆಸ್ಟೋ ರೆಂಟ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಡ್ಯಾನ್ಸ್‌ ಬಾರ್‌ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ತಿಳಿದು ಬಂದಿತ್ತು. ಮಾಹಿತಿ ಆಧರಿಸಿ ಫೆ.18ರಂದು ದಾಳಿ ನಡೆಸಿದ ಸಿಸಿಬಿ ಪೊಲೀಸರು, ಡ್ಯಾನ್ಸ್‌ ಬಾರ್‌ ನಡೆಸುತ್ತಿದ್ದ ಮೂವರನ್ನು ಬಂಧಿಸಿ, 28 ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ.

ಈ ಡ್ಯಾನ್ಸ್‌ಬಾರ್‌ನ ಪರವಾನಗಿಯನ್ನು ರದ್ದು ಪಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಪೊಲೀಸರು ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next