Advertisement

ಸಾಹೇಬ್ರಕಟ್ಟೆ: ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ 59 ಕೋಣಗಳ ವಶ

04:30 PM Jul 24, 2020 | keerthan |

ಕೋಟ: ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ಹರಿಯಾಣದಿಂದ ಕೇರಳಕ್ಕೆ ಟ್ರಕ್ ನಲ್ಲಿ ಸಾಗಾಟ ನಡೆಸುತ್ತಿದ್ದ 59 ಕೋಣಗಳನ್ನು ಸಾಹೇಬ್ರಕಟ್ಟೆ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ವಶಪಡಿಸಿಕೊಂಡ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.

Advertisement

ಕೋಟ ಠಾಣೆಯ ಪ್ರೊಬೇಷನಲ್ ಪಿಎಸ್ಐ ಸಂತೋಷ್ ಅವರು ಸಿಬಂದಿಗಳ ಜತೆ ಟ್ರಕ್ ಅನ್ನು ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಕೋಣಗಳು ಸುಮಾರು 1.5 ವರ್ಷ ವಯಸ್ಸಿನವಾಗಿದ್ದು, ಬ್ರಹ್ಮಾವರ ವೃತ್ತ ನಿರಿಕ್ಷಕ ಆನಂತಪದ್ಮನಾಭ, ಕೋಟ ಠಾಣಾಧಿಕಾರಿ ಸಂತೋಷ್ ಬಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಕ್ಷಿಸಲ್ಪಟ್ಟ ಕೋಣಗಳನ್ನು ನೀಲಾವರ ಗೋ ಶಾಲೆಗೆ ಬಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next